ವಿವಿಧ ಸೌಕರ್ಯ ಕಲ್ಪಿಸುವಂತೆ ಆಗ್ರಹ

2
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಅವರಿಗೆ ಈಚೆಗೆ ಖಾನಾಪುರ ತಾಲೂಕಿನ ಕಕ್ಕೇರಿ ಹಾಗೂ ಸವದತ್ತಿ ತಾಲೂಕಿನ ಹಿರೂರು ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ಸಂಟನೆಗಳಿಂದ ಮನವಿ ಸಲ್ಲಿಸಲಾಯಿತು. ಹನುಮಂತಪ್ಪ ದೀವಿಗಿಹಳ್ಳಿ, ಕಿಶೋರ ಮಿಠಾರಿ, ಡಿ.ಎಚ್​. ನವಲಗುಂದ, ಬಸವರಾಜ ಬಾರಿಗಿಡದ, ಮಹಾದೇವಿ ಹುಯಿಲಗೋಳ ಇತರರಿದ್ದರು.
Published on

ಕಕ್ಕೇರಿ: ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮ ಹಾಗೂ ಸವದತ್ತಿ ತಾಲೂಕಿನ ಹಿರೂರು ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂ, ಅಖಿಲ ಕರ್ನಾಟಕ ಮಹಿಳಾ ರಾಜ್ಯ ರೈತ ಸಂ ಮತ್ತು ನೇಗಿಲಯೋಗಿ ಸುರಾ ರೈತ ಸಂದ ವತಿಯಿಂದ ಈಚೆಗೆ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಅವರಿಗೆ ಮನವಿ ಸಲ್ಲಿಸಲಾಯಿತು.

ಕಕ್ಕೇರಿ ಗ್ರಾಮದ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು. ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಸ್ಥಾಪಿಸುವುದು. ಬಿಷ್ಠಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಜಾತ್ರೆಗೆ ಹೆಚ್ಚಿನ ಅನುದಾನ ನೀಡುವುದು. ಗ್ರಾಮಕ್ಕೆ ಉಪ ಪೊಲೀಸ್​ ಠಾಣೆ ಮಂಜೂರು ಮಾಡುವುದು. ಕಕ್ಕೇರಿಯಿಂಧ ವಿವಿಧ ಪುಣ್ಯಕ್ಷೇತ್ರಗಳಿಗೆ ಹೋಗಿ ಬರಲು ಬಸ್​ ಸೌಕರ್ಯ ಕಲ್ಪಿಸುವುದು. ಖಾನಾಪುರ ತಾಲೂಕಿನಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡುವುದು. ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಅಖಿಲ ಕರ್ನಾಟಕ ರೈತ ಸಂದ ಅಧ್ಯ ಹನುಮಂತಪ್ಪ ದೀವಿಗಿಹಳ್ಳಿ, ಉಪಾಧ್ಯ ಕಿಶೋರ ಮಿಠಾರಿ, ಡಿ.ಎಚ್​. ನವಲಗುಂದ, ಬಸವರಾಜ ಬಾರಿಗಿಡದ, ಅಧ್ಯೆ ಮಹಾದೇವಿ ಹುಯಿಲಗೋಳ, ರಮೇಶ ವೀರಾಪುರ, ಬಿಷ್ಟಪ್ಪ ಸುಂಬಳಿ, ರಾಮು ಚನ್ನಪುರಿ, ರಾಜು ಹೊನ್ನಾಪುರ, ನೇಗಿಲಯೋಗಿ ಸುರಾ ರೈತ ಸಂದ ಕಾರ್ಯದರ್ಶಿ ಬಸನಗೌಡ ಪಾಟೀಲ, ಗೌರವಾಧ್ಯ ಈರಣ್ಣ ಅಂಗಡಿ, ಸಂಚಾಲಕ ಮಹಾಂತೇಶ ಗೌರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net