

ಚಿಕ್ಕೋಡಿ ಗ್ರಾಮೀಣ: ಯಕ್ಸಂಬಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ಉಗಾಂಡಾ ದೇಶದ ಎಂಬರಾರಾ ವಿಶ್ವವಿದ್ಯಾಲಯದ ಚಿಕ್ಕಮಕ್ಕಳ ತಜ್ಞ, ಸಂಶೋಧಕ ಡಾ.ಡೇಟಾ ಸೆಂಟೋರಿನಾ ಹಾಗೂ ಕೆಎಲ್‌ಇ ಸಂಸ್ಥೆಯ ಜವಾಹಾರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕದ ಸಂಶೋಧನಾ ವೈದ್ಯರ ನೇತೃತ್ವದಲ್ಲಿ ಅನುಷ್ಠಾನಗೊಂಡ ಮಕ್ಕಳ ಉಸಿರಾಟ ತೊಂದರೆ ನಿವಾರಿಸುವ ಏರ್ ಅಧ್ಯಯನ ಕುರಿತು ಸೋಮವಾರ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕರಿಗೆ ತರಬೇತಿ ನೀಡಿದರು.
ಡಾ.ಸೆಂಟೋರಿನಾ ಚಿಕ್ಕೋಡಿ ತಾಲೂಕಿನ ಅಂಕಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಹಾಗೂ ಯಕ್ಸಂಬಾ ಸಮುದಾಯ ಆರೋಗ್ಯ ಕೇಂದ್ರದ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಎಲ್‌ಇ ನವಜಾತ ಶಿಶು ತಜ್ಞ ವೈದ್ಯ ಡಾ.ಎಸ್.ಎಂ.ಧಡೇದ, ಯಕ್ಸಂಬಾ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯವೈದ್ಯಾಕಾರಿ ಡಾ.ಶಾಂತಾರಾಮ ಬಾಗೇವಾಡಿ, ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಕಾರಿ ಡಾ.ಸಂತೋಷ ಕೊಣ್ಣೂರಿ, ಅಂಕಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಮಹೇಶ ಕುಂಬಾರ, ಡಾ.ಅರುಣ ಝಾಪಗೋಳ, ಡಾ.ಸಂತೋಷ ವಿಭೂತೆ, ಡಾ.ಕಮಲಾ ಗಡೇದ, ಡಾ.ಜಯಲಕ್ಷ್ಮೀ ಮುಸಾಳೆ, ಡಾ.ಶೀತಲ ಜನಾಜ, ಡಾ.ಸುಕುಮಾರ ಭಾಗಾಯಿ, ಡಾ.ಸುನೀಲ ವರ್ಣೇಕರ, ಡಾ.ಗವಿ ಸಾಲಿಮಠ, ಡಾ.ವೈಶಾಲಿ ಬಾಗೇವಾಡಿ, ಡಾ.ಮಯೂರಿ ಕುಲಕರ್ಣಿ ಇತರರು ಇದ್ದರು.