ವಿವಿಧ ಸಮುದಾಯಗಳಿಗೆ ಆದ್ಯತೆ

5 mlv 2
ಮಳವಳ್ಳಿಯ ಆಶ್ರಯ ಬಡಾವಣೆಯಲ್ಲಿ ಶನಿವಾರ ಬಾಬು ಜಗಜೀವನ ರಾಮ್ ಭವನ ನಿರ್ಮಾಣಕ್ಕೆ ಶಾಸಕ ಡಾ.ಕೆ.ಅನ್ನದಾನಿ ಭೂಮಿಪೂಜೆ ನೆರವೇರಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಷಡಕ್ಷರಿಮುನಿ ದೇಶಕೇಂದ್ರ ಸ್ವಾಮೀಜಿ, ಪ್ರೊ.ಗಂಗಾಧರ, ರಾಧಾ, ಪ್ರಶಾಂತ್, ನಂದಕುಮಾತ್ ಇತರರು ಇದ್ದರು.
Published on

ಮಳವಳ್ಳಿ: ತಾಲೂಕಿನಲ್ಲಿ ಸಮಸಮಾಜ ನಿರ್ಮಾಣಕ್ಕಾಗಿ ಎಲ್ಲ ಸಮುದಾಯಗಳ ಚಟುವಟಿಕೆಗೂ ಆದ್ಯತೆ ನೀಡಲಾಗಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಬಾಬು ಜಗಜೀವನ ರಾಮ್ ಭವನ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಧ್ವನಿ ಇಲ್ಲದ ಸಮುದಾಯಗಳಿಗೂ ಸಮಾನ ಹಕ್ಕು ದೊರಕಿಸಿಕೊಡುವುದು ನಮ್ಮ ಕರ್ತವ್ಯವಾಗಬೇಕು ಎಂದರು.

ದಲಿತರ ಉದ್ಧಾರಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಮುಖಂಡರು ಸ್ವಾತಂತ್ರ್ಯ ಪೂರ್ವದಿಂದಲೂ ಕೆಳ ಸಮುದಾಯಗಳನ್ನು ಮತ ಗಳಿಕೆ ಸಾಧನ ಮಾಡಿಕೊಂಡಿದ್ದರು. ಹಿಂದುಳಿದ ವರ್ಗದ ದೊಡ್ಡ ದೊಡ್ಡ ನಾಯಕರನ್ನೇ ಕಣಕ್ಕೆ ಇಳಿಸಿ ಸೋಲಿಸಿದ್ದು ಕಾಂಗ್ರೆಸ್ ಇತಿಹಾಸ ಎಂದರು.

ಸಾಮಾಜಿಕ ನ್ಯಾಯ ನೀಡುವ ಉದ್ದೇಶದಿಂದ ತಾಲೂಕಿನ ಕುಗ್ರಾಮಗಳಿಗೆ ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಮೂಲಸೌಕರ್ಯ ಒದಗಿಸಲಾಗಿದೆ ಎಂದರು.

ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರೊ.ಗಂಗಾಧರ, ಪುರಸಭೆ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷ ಪ್ರಶಾಂತ, ಸದಸ್ಯರಾದ ಟಿ.ನಂದಕುಮಾರ, ಸಿದ್ದರಾಜು, ನಡಕಲಪುರ ಮಂಜುನಾಥ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net