ವಿವಿಧ ಸಂಘಟನೆಗಳಿನಂದ ಡಿಸಿಗೆ ಮನವಿ

ydg02
Published on

ಯಾದಗಿರಿ: ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಸಂಬAಧಿಸಿದAತೆ ಸುಮಾರು ಒಂಬತ್ತು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಯಾದಗಿರಿ ಜಿಲ್ಲಾ ಕಿರಾಣಿ ಮತ್ತು ಜನರಲ್ ಸ್ಟೋರ್ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಂಟಿಯಾಗಿ ಮಂಗಳವಾರ ಜಿಲ್ಲಾಧಿಕಾರಿಗಳ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ನಂಜುAಡಪ್ಪ ವರದಿ ಶಿಫಾರಸ್ಸಿನಂತೆ ರಾಯಚೂರಿಗೆ ಈ ಕೂಡಲೇ ಏಮ್ಸ್ ಸ್ಥಾಪಿಸಬೇಕು. ಭಾರತ ಸರ್ಕಾರದ ಮಹತ್ವಾಂಕ್ಷಿ ಜಿಲ್ಲೆಗಳಲ್ಲಿ ಒಂದಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಜನ ಗುಳೆ ಹೋಗುವುದನ್ನು ತಪ್ಪಿಸಲು ಬೃಹತ್ ಕೈಗಾರಿಕೆ ಸ್ಥಾಪಿಸಬೇಕು. ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಬೇಕು. ಕೌಶಲ ಅಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿ ಅದಕ್ಕೆ ಬೇಕಾದ ಕೋರ್ಸ್ಗಳನ್ನು ಅನುಷ್ಠಾಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಜಿಲ್ಲೆಯಲ್ಲಿ ಹರಿದು ಹೋಗುವ ಭೀಮಾ ಮತ್ತು ಕೃಷ್ಣಾ ನದಿಗಳಿಗೆ ಅಡ್ಡಲಾಗಿ ಇನ್ನೂ ಎರಡು ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಬೇಕು. ಹಳೇ ಬ್ರಿಜ್ ಕಂ ಬ್ಯಾರೇಜ್‌ಗಳಿಗೆ ಮ್ಯಾನ್ಯುವೆಲ್ ಗೇಟ್ ಇದ್ದು, ಅದರಿಂದ ನೀರು ಸೋರಿಕೆಯಾಗುತ್ತಿದೆ. ಇದನ್ನು ತಪ್ಪಿಸಲು ಹೈಡ್ರಾಲಿಕ್ ಪದ್ಧತಿ ಗೇಟ್ ಅಳವಡಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಜನರಿಗೆ ಅನುಕೂಲವಾಗಲು ಈ ಎರಡು ಜಿಲ್ಲೆಗಳ ಮಧ್ಯಭಾಗದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಬೇಕು. ಕಡೇಚೂರು -ಬಾಡಿಯಾಳ್ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪಿಸಿ, ಅಲ್ಲಿ ಭೂಮಿ ಕೊಟ್ಟ ರೈತರ ಪ್ರತಿ ಕುಟುಂಬಕ್ಕೂ ಉದ್ಯೋಗ ನೀಡಬೇಕು ಮತ್ತು ಜಿಲ್ಲೆಯ ವಡಗೇರಾದಲ್ಲಿ ಜೆಸ್ಕಾಂ ಉಪವಿಭಾಗ ಸ್ಥಾಪಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಡಾ.ಸುಶೀಲಾ ಅವರಿಗೆ ಸಲ್ಲಿಸಲಾಯಿತು.
ವಿವಿಧ ಸಂಘಟನೆಗಳ ಮುಖಂಡರಾದ ವೈಜನಾಥ ಪಾಟೀಲ್ ತುಮಕೂರು, ಡಾ.ಸಿದ್ದರಾಜ ರೆಡ್ಡಿ, ಮಲ್ಲಣ್ಣಗೌಡ ಹಳಿಮನಿ, ಮಲ್ಲಿಕಾರ್ಜುನ ಶಿರಗೋಳ್, ಟಿ.ಎನ್.ಭೀಮು ನಾಯಕ, ದಿನೇಶ ದೋಖಾ, ಮಲ್ಲು ಮಾಳಿಕೇರಿ, ವಿಶ್ವಾರಾಧ್ಯ ದಿಮ್ಮೆ, ಅಂಬರೀಶ್ ಹುತ್ತಿಮನಿ, ಪಪ್ಪುಗೌಡ, ಶರಣು ಸಾಹುಕಾರ, ಭೀಮರಾಯ, ಹನುಮಂತ, ವಿಜಯ ರಾಠೋಡ್, ಅಬ್ದುಲ್ ರಿಯಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net