

ಚಿತ್ರದುರ್ಗ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಸೆ.29ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲೂ ನಾನಾ ಸಂಘಟನೆಗಳು ಬೆಂಬಲ ಸೂಚಿಸಿವೆ.
ರೈತ ಸಂಘಟನೆಗಳು,ಕರ್ನಾಟಕ ರಕ್ಷಣಾ ವೇದಿಕೆ ವಿವಿಧ ಬಣಗಳು,ಕನ್ನಡಪರ ಸಂಘಟನೆಗಳು,ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವದ್ಧಿ ಸಂಘ,ಕರುನಾಡ ವಿಜಯಸೇನೆ,ಸರ್ವೋದಯ ಕರ್ನಾಟಕ ಪಕ್ಷ,ಎಪಿಎಂಸಿ ಹಮಾಲರ ಸಂಘ,ವನ್ಯಜೀವಿ ಸಂರಕ್ಷಣಾ ವೇದಿಕೆ ಸೇರಿದಂತೆ ನಾನಾ ಸಂಘ ಸಂಸ್ಥೆಗಳು ಬಂದ್ ಬೆಂಬಲಿಸಲಿವೆ. ನಾನಾ ಸಂಘಟನೆಗಳ ಕಾರ‌್ಯಕರ್ತರು ಬೆಳಗ್ಗೆ 6ರಿಂದಲೇ ರಸ್ತೆ ಗಿಳಿದು ಪ್ರತಿಭಟಿಸಲಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ ಇಲ್ಲ
ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂದು ನಿಗಮದ ಚಿತ್ರದುರ್ಗ ವಿಭಾಗೀಯ ನಿಯಂತ್ರಕ ಸಿದ್ದೇಶ್‌ಹೆಬ್ಬಾಳ್ ತಿಳಿಸಿದ್ದಾರೆ. ಖಾಸಗಿ ಬಸ್‌ಗಳು ಸಂಚರಿಸಲಿವೆ,ಆದರೆ ಪರಿಸ್ಥಿತಿ ನೋಡಿಕೊಂಡು ಅನ್ಯ-ಜಿಲ್ಲೆಗಳಿಗೆ ತೆರಳುವ ಬಸ್‌ಗಳನ್ನು ಓಡಿಸಲಾಗು ವುದೆಂದು ಜಿಲ್ಲಾ ಖಾಸಗಿ ಬಸ್‌ಮಾಲೀಕರ ಸಂಘದ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದ್ದಾರೆ. ಶಾಲಾ,ಕಾಲೇಜುಗಳ ತರಗತಿಗಳು ಎಂದಿ ನಂತೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಸ್ಪಷ್ಟಪಡಿಸಿದ್ದಾರೆ.
ಬಂದ್ ಬೆಂಬಲಿಸಿ
ಬಂದ್‌ನ್ನು ಬೆಂಬಲಿಸುವಂತೆ ನಾಗರಿಕರಿಗೆ ರಾಜ್ಯಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಟಿ.ನವೀನ್‌ಕುಮಾರ್ ಮನವಿ ಮಾಡಿದ್ದಾರೆ.ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವ ರು,ನಾಡಿನ ನೆಲ-ಜಲ ಉಳಿವಿಗೆ ಹೋರಾಟದ ಅಗತ್ಯವಿದೆ ಎಂದರು.ಉಪಾಧ್ಯಕ್ಷೆ ಜಿ.ಅಂಬಿಕಾದಿನೇಶ್,ಪ್ರಧಾನ ಕಾರ‌್ಯದರ್ಶಿ ಮಾಲತೇ ಶ್‌ಅರಸ್ ಹರ್ತಿಕೋಟೆ,ಸಂಚಾಲಕ ಟಿ.ರುದ್ರಮುನಿ,ಕಾನೂನು ಸಲಹೆಗಾರ ಡಾ.ಎಂ.ಸಿ.ನರಹರಿ ಮತ್ತಿತರರು ಇದ್ದರು.
ತಮಿಳುನಾಡಿಗೆ ಕಾವೇರಿ ಹರಿಸುವ ರಾಜ್ಯಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಕರೆ ನೀಡಿರುವ ಬಂದ್‌ಗೆ ಜಿಲ್ಲೆ ಜನರು ಬೆಂಬಲ ನೀಡಬೇಕೆಂದು ಕರ್ನಾಟಕ ಸರ್ವೋದಯ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮನವಿ ಮಾಡಿದರು. ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು,ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವಂತೆ ಜಿಲ್ಲಾ ಡಳಿತವನ್ನು ಒತ್ತಾಯಿಸಿದರು.
ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ‌್ಯದರ್ಶಿ ವೈ.ಕುಮಾರ್,ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್,ವಿಶ್ವನಾರಾಯಣಮೂರ್ತಿ,ಸಿ.ಜಗದೀಶ್,ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್‌ಶೆಟ್ಟಿ ಬಣ ದ ಜಿಲ್ಲಾಧ್ಯಕ್ಷ ಎಸ್.ಕೆ.ಮಹಂತೇಶ್,ಸತ್ಯಕೀರ್ತಿ,ಗೋಪಿನಾರಾಯಣಮೂರ್ತಿ,ಸುರೇಶ,ಮಂಜುನಾಥ,ಆರ್.ಪ್ರದೀಪ್, ಸಾಯಿ ಕುಮಾರ್,ರೈತ ಮುಖಂಡರಾದ ಕೆ.ಜಯಪ್ರಕಾಶ್‌ಗೌಡ,ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್,ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ,ಧನಂಜಯ ಹಂಪಯ್ಯನಮಾಳಿಗೆ,ಲಕ್ಷ್ಮೀಕಾಂತ್ ಮತ್ತಿತರರು ಇದ್ದರು.
ಇಂದು ನಿಷೇಧಾಜ್ಞೆ ಜಾರಿ
ಚಿತ್ರದುರ್ಗ:ಕರ್ನಾಟಕ ಬಂದ್ ಕರೆಯ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸೆ.29ರಂದು ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಆದೇಶಿಸಿದ್ದಾರೆ. ಅಂದು ಬೆಳಗ್ಗೆ 6ರಿಂದ ಸಂಜೆ 6ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಅವರು ಪ್ರಕಟಣೆಯ ಲ್ಲಿ ತಿಳಿಸಿದ್ದಾರೆ.
ಜಿಲ್ಲಾದ್ಯಂತ ಸೂಕ್ತ ಬಂದೋಬಸ್ತ್
ಚಿತ್ರದುರ್ಗ:ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್ ಸಂದರ್ಭದಲ್ಲಿ ಬಲವಂತದಿಂದ ಶಾಲಾ,ಕಾಲೇಜು, ಅಂಗಡಿ,ಮುಂಗಟ್ಟುಗಳನ್ನು ಮುಚ್ಚಿಸುವಂತಿಲ್ಲ ಎಂದು ಎಸ್‌ಪಿ ಧರ್ಮೇಂದ್ರ ಕುಮಾರ್‌ಮೀನಾ ಹೇಳಿದ್ದಾರೆ. ಸಾರಿಗೆ ಸೇರಿ ಯಾವುದೇ ರೀತಿಯ ವಾಹನಗಳ ಸಂಚಾರಕ್ಕೂ ಅಡ್ಡಿಪಡಿಸುವಂತಿಲ್ಲ,ಎಂದಿನ ಜನ ಜೀವನಕ್ಕೆ ಯಾರಾದರೂ ಅಡ್ಡಿ ಪಡಿಸಿದರೆ ಅಂಥವರ ವಿರುದ್ಧ ಸೂಕ್ತ ಕಾ ನೂನು ಕ್ರಮ ಜರುಗಿಸಲಾಗುವುದು. ಜಿಲ್ಲಾದ್ಯಂತೆ ಅಹಿತಕರ ಘಟನೆಗಳಾಗದಂತೆ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.