ವಿವಿಧ ರೈಲ್ವೆ ನಿಲ್ದಾಣಗಳಿಗೆ ಬೇಡಿಕೆ

Published on

ಬಳ್ಳಾರಿ : ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಜಿಲ್ಲಾದ್ಯಕ್ಷ ಅಲ್ಲಂ ಪ್ರಶಾಂತ ಅವರು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣಗೆ ಮನವಿ ಸಲ್ಲಿಸಿದರು.
ಬೆಂಗಳೂರು - ಗುಂತಕಲ್ ನಡುವಿನ ಸಂಚಾರ ಸುಗಮಗೊಳಿಸಲು ತುಮಕೂರು ಹಾಗೂ ಚೆಳ್ಳಕೆರೆ ನಡುವಿನ ಹೊಸ ಸಂಪರ್ಕ ಸ್ಥಾಪಿಸಬೇಕು. ತುಮಕೂರು - ಬಳ್ಳಾರಿ ಸಂಪರ್ಕಿಸಿದ ಬಳಿಕ ಬಳ್ಳಾರಿ ಹಾಗೂ ಆದೋನಿ ಮಾರ್ಗ ಸಂಪರ್ಕಿಸಲು ಸೂಚಿಸಬೇಕು. ಜಿಲ್ಲೆಯಲ್ಲಿ ಕಬ್ಬಿಣ ಅದಿರು ರಪ್ತುಗಾಗಿ ಬಳ್ಳಾರಿ ನಡುವಿನ ಸ್ಟೇಟ್ ಆಫ್ ದಿ ಆರ್ಟ್ ರೈಲ್ವೆ ನಿಲ್ದಾಣ ಮತ್ತು ಸಂಡೂರು ಹಾಗೂ ಧರ್ಮಾಪುರ ನಡುವೆ ಹೊಸ ರೈಲು ನಿಲ್ದಾಣದ ನಿರ್ಮಿಸಬೇಕು. ಅಲ್ಲದೆ, ಸ್ವಾಮಿ ಹಳ್ಳಿಯಿಂದ ಚೆಳ್ಳಕೆರೆ - ಬಳ್ಳಾರಿ ರೈಲು ಮಾರ್ಗ ಕಲ್ಪಿಸಬೇಕು. ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನಷ್ಟು ಬೋಗಿಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net