ವಿವಿಧ ರೈಲುಗಳ ಸಂಚಾರ ರದ್ದು

train
Published on

ಹುಬ್ಬಳ್ಳಿ: ಕುಂದಗೋಳ ಮತ್ತು ಹುಬ್ಬಳ್ಳಿ ದಕ್ಷಿಣ ನಿಲ್ದಾಣಗಳಲ್ಲಿ ಕೈಗೊಂಡಿರುವ ಕಾಮಗಾರಿ ಹಿನ್ನೆಲೆಯಲ್ಲಿ ವಿವಿಧ ರೈಲುಗಳ ಸಂಚಾರ ರದ್ದು/ಭಾಗಶಃ ರದ್ದುಗೊಳಿಸಲಾಗಿದೆ.

ಜ.27ರಂದು ಅರಸಿಕೆರೆ - ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್ ರೈಲು ಸಂಚಾರ ರದ್ದಾಗಿದೆ.

ಭಾಗಶಃ ರದ್ದು : 27ರಂದು ಕೆಎಸ್​ಆರ್ ಬೆಂಗಳೂರು - ಎಸ್​ಎಸ್​ಎಸ್ ಹುಬ್ಬಳ್ಳಿ ಜನಶತಾಬ್ದಿ ಡೈಲಿ ಎಕ್ಸ್​ಪ್ರೆಸ್ ರೈಲು ಹರಿಹರದವರೆಗೆ ಮಾತ್ರ ಸಂಚರಿಸಲಿದೆ. ಹರಿಹರ-ಎಸ್​ಎಸ್​ಎಸ್ ಹುಬ್ಬಳ್ಳಿ ಮಧ್ಯದ ಸಂಚಾರ ರದ್ದಾಗಿದೆ. ಎಸ್​ಎಸ್​ಎಸ್ ಹುಬ್ಬಳ್ಳಿ - ಕೆಎಸ್​ಆರ್ ಬೆಂಗಳೂರು ಜನಶತಾಬ್ದಿ ಡೈಲಿ ಎಕ್ಸ್​ಪ್ರೆಸ್ ರೈಲು ಹರಿಹರದಿಂದ ಸಂಚಾರ ಪ್ರಾರಂಭಿಸಲಿದೆ.

ದ್ವಿಪಥ ಮಾರ್ಗ ಕಾಮಗಾರಿ : ಕುಂದಗೋಳ ಮೊದಲ ಹಂತದ ದ್ವಿಪಥ ಮಾರ್ಗ ನಿರ್ಮಾಣ ಕಾಮಗಾರಿ ಕೈಗೊಂಡಿರುವುದರಿಂದ ವಿವಿಧ ರೈಲುಗಳ ಸಂಚಾರ ರದ್ದು/ಭಾಗಶಃ ರದ್ದುಗೊಳಿಸಲಾಗಿದೆ.

ಜ. 31 ರಿಂದ ಫೆ. 4ರವರೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ - ಚಿತ್ರದುರ್ಗ- ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್, ಎಸ್​ಎಸ್​ಎಸ್ ಹುಬ್ಬಳ್ಳಿ - ಅರಸಿಕೆರೆ ಡೈಲಿ ಎಕ್ಸ್​ಪ್ರೆಸ್, ಫೆ. 1 ರಿಂದ 5ರವರೆಗೆ ಅರಸಿಕೆರೆ- ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್, ಫೆ. 4ರಂದು ಬೆಳಗಾವಿ - ಮೈಸೂರು ವಿಶ್ವಮಾನವ ಡೈಲಿ ಎಕ್ಸ್​ಪ್ರೆಸ್, 5ರಂದು ಮೈಸೂರು - ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್​ಪ್ರೆಸ್ ರೈಲುಗಳ ಸಂಚಾರ ರದ್ದಾಗಿದೆ.

ಭಾಗಶಃ ರದ್ದು : ಜ. 31 ರಿಂದ ಫೆ. 4ರವರೆಗೆ ಕೆಎಸ್​ಆರ್ ಬೆಂಗಳೂರು - ಎಸ್​ಎಸ್​ಎಸ್ ಹುಬ್ಬಳ್ಳಿ ಜನಶತಾಬ್ದಿ ಡೈಲಿ ಎಕ್ಸ್​ಪ್ರೆಸ್ ರೈಲು ಸಂಚಾರ ಹರಿಹರ- ಎಸ್​ಎಸ್​ಎಸ್ ಹುಬ್ಬಳ್ಳಿ ಮಧ್ಯೆ ರದ್ದಾಗಿದ್ದು, ಈ ರೈಲು ಹರಿಹರವರೆಗೆ ಮಾತ್ರ ಸಂಚರಿಸಲಿದೆ. ಎಸ್​ಎಸ್​ಎಸ್ ಹುಬ್ಬಳ್ಳಿ - ಕೆಎಸ್​ಆರ್ ಬೆಂಗಳೂರು ಜನಶತಾಬ್ದಿ ಡೈಲಿ ಎಕ್ಸ್​ಪ್ರೆಸ್ ರೈಲು ಹರಿಹರದಿಂದ ಸಂಚಾರ ಪ್ರಾರಂಭಿಸಲಿದೆ.

ಫೆ. 2ರಂದು ಕೊಚುವೆಲಿ - ಎಸ್​ಎಸ್​ಎಸ್ ಹುಬ್ಬಳ್ಳಿ ವೀಕ್ಲಿ ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್ ರೈಲು ಸಂಚಾರ ಎಸ್​ಎಂಎಂ ಹಾವೇರಿ- ಎಸ್​ಎಸ್​ಎಸ್ ಹುಬ್ಬಳ್ಳಿ ಮಧ್ಯೆ ರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net