ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ

Published on

ಬಳ್ಳಾರಿ : ಜಿಲ್ಲಾ ಗುತ್ತಿಗೆದಾರರ ಸಮಸ್ಯೆಗಳು ಹಾಗೂ ಜಿಎಸ್‌ಟಿ ಸೆಮಿನಾರ್ ಆಯೋಜಿಸುವದರ ಬಗ್ಗೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಇಲ್ಲಿನ ಎಡಿಸಿ ಕಚೇರಿಯಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಜಿಲ್ಲೆಗೆ ಸಂಬಂಧಪಟ್ಟ ಹಲವಾರು ಗುತ್ತಿಗೆದಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಮಗಾರಿಗಳನ್ನು ಟೆಂಡರ್ ಆಧಾರ ಮೇಲೆ ವಹಿಸಿಕೊಂಡು ನಿರ್ವಹಿಸುತ್ತಿದ್ದು, ಕಾಲ ಕಾಲಕ್ಕೆ ಜಿಎಸ್‌ಟಿ ತೆರಿಗೆ ನಿಯಾಮವಳಿಗಳು ಬದಲಾಗುವುದರಿಂದ ಗುತ್ತಿಗೆದಾರರಲ್ಲಿ ಗೊಂದಲವಿರುದರಿಂದ ಜಿಎಸ್‌ಟಿ ನಿಯಾಮವಳಿಗಳ ಶಿಬಿರ ಏರ್ಪಡಿಸಬೇಕು. ಇತ್ತೀಚೆಗೆ ಕೇಂದ್ರ ಸರ್ಕಾರ ಕೆಲಸ ಒಪ್ಪಂದ ಜಿಎಸ್‌ಟಿಯನ್ನು ಶೇ. 12 ರಿಂದ 18ಕ್ಕೆ ಹೆಚ್ಚಿಸಿದೆ. ಯಾವ ಗುತ್ತಿಗೆದಾರರಿಗೂ ಉಳಿದ ಶೇ. 6 ರಷ್ಟು ಹಣವನ್ನು ಇಲಾಖೆಗಳಿಂದ ಪಾವತಿಸಿರುವುದಿಲ್ಲ. ರಾಜ್ಯ ಸರ್ಕಾರದ ಅನುಮೋದನೆಗೊಂಡ ಇಲಾಖೆಗಳಲ್ಲಿ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಪತ್ರದ ಮೂಲಕ ಟೆಂಡರ್ ವಹಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿದರು ಹಣವನ್ನು ನೀಡದೆ ಇರುವುದರಿಂದ ಈಗಾಗಲೇ ಗುತ್ತಿಗೆದಾರರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುತ್ತದೆ. ಆದ್ದರಿಂದ, ಜಿಎಸ್‌ಟಿ ತೆರಿಗೆ ವ್ಯತ್ಯಾಸ ಮೊತ್ತವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡದಿದ್ದರೆ ಗುತ್ತಿಗೆದಾರರು ಬರಿಸಲು ಆಶಕ್ತರಾಗಿರುತ್ತಾರೆ. ಕೆಲಸದ ಒಪ್ಪಂದ ಜಿಎಸ್‌ಟಿ ನಿಯಾಮವಳಿಗಳು ಬದಲಾವಣೆ ಹಿನ್ನೆಲೆ ತಕ್ಷಣ ಸಭೆ ಕರೆದು ನಿಯಮಗಳನ್ನು ತಿಳಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net