

ಬಳ್ಳಾರಿ : 371ಜೆ ಬಗ್ಗೆ ಗೊಂದಲ ಸೃಷ್ಠಿಸುತ್ತಿರುವ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಹಾಗೂ ಸಂವಿಧಾನ ಅನುಚ್ಛೇದ 371ಜೆ ಮೀಸಲಾತಿ ಸಮಗ್ರ ಹಾಗೂ ಸಮರ್ಪಕ ಅನುಷ್ಠಾನಕ್ಕಾಗಿ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಇಲ್ಲಿನ ಗಾಂಧಿಭವನದಿಂದ ಡಿಸಿ ಕಚೇರಿಯವರೆಗೆ ರ‌್ಯಾಲಿ ನಡೆಸಿ, ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಮಾತನಾಡಿ, 371ಜೆ ಬಗ್ಗೆ ಗೊಂದಲ ಸೃಷ್ಠಿಸುತ್ತಿರುವ ಸಂಘಟನೆಗಳ ವಿರುದ್ಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ನ್ನು ರಾಯಚೂರಿನಲ್ಲಿ ಸ್ಥಾಪಿಸುವಂತೆ ನಡೆಸುತ್ತಿರುವ ಅನಿರ್ಧಿಷ್ಟವಧಿ ಧರಣಿಯು ಇಂದಿಗೆ 796ನೇ ದಿನಕ್ಕೆ ಕಾಲಿಟ್ಟಿದೆ. ಈ ಸರ್ಕಾರದ ವಿಳಂಬತನಕ್ಕೆ ಸಮಿತಿ ಖಂಡಿಸಿದೆ. ಕೂಡಲೇ ಈ ಸುದೀರ್ಘ ಹೋರಾಟಕ್ಕೆ ಸ್ಪಂದಿಸಿ ಆಧಿಸೂಚನೆ ಪ್ರಕಟಿಸಿ, ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವುದಾಗಿ ಘೋಷಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶದ ಆರೋಗ್ಯ ಹಾಗೂ ಜನರ ಅಮೂಲ್ಯ ರಕ್ಷಣೆಗಾಗಿ ಈ ದಿಟ್ಟ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಿತಿ ಸದಸ್ಯರಾದ ಹೇಮಂತರಾಜ್, ವಿಜಯಕುಮಾರ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜೆ.ವಿ. ಮಂಜುನಾಥ, ಮೀನಳ್ಳಿ ಚಂದ್ರಶೇಖರ, ಶ್ರೀಮತಿ ಪದ್ಮಾವತಿ, ಕಪ್ಪಗಲ್ ಓಂಕಾರಪ್ಪ, ಜೋಗಿನ್‌ವಿಜಯ್,