ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 29 ರಂದು ಪ್ರತಿಭಟನೆ

Protest on the 29th demanding fulfillment of various demands
ವಿಜಯಪುರದಲ್ಲಿ ಭಾರತ ಕಮ್ಯೂನಿಸ್ಟ್​ ಪಕ್ಷ (ಮಾರ್ಕ್ಸವಾದಿ) ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಯು. ಬಸವರಾಜ, ಭೀಮರಾಯ ಪೂಜಾರಿ, ಸುರೇಖಾ ರಜಪೂತ, ಸುರೇಶ ಜಿ.ಬಿ. ಮತ್ತಿತರರಿದ್ದಾರೆ.
Published on

ವಿಜಯಪುರ: ಬಗರ್​ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸುವುದು, ಆಲಮಟ್ಟಿ ಜಲಾಶಯ 524 ಮೀಟರ್​ಗೆ ಎತ್ತರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಜೂ. 29 ರಂದು ಬೃಹತ್​ ಪ್ರತಿಭಟನೆ, ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭಾರತ ಕಮ್ಯೂನಿಸ್ಟ್​ ಪಕ್ಷ (ಮಾರ್ಕ್ಸವಾದಿ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು. ಬಸವರಾಜ ಹೇಳಿದರು.

ನಗರದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬಸವರಾಜ, ರಾಜ್ಯಾದ್ಯಂತ ರಾಜಕೀಯ ಪ್ರಚಾರಾಂದೋಲನ ಸಂಟಿಸಲು ಮತ್ತು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್​ ಪ್ರತಿಭಟನಾ ಬಹಿರಂಗ ಸಭೆ ನಡೆಸಲು ಸಿಪಿಐಎಂ ತನ್ನ ಎಲ್ಲ ಟಕಗಳು ಹಾಗೂ ಜನತೆಗೆ ಕರೆ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ, ಆಡಳಿತ, ಕೋಮುವಾದಿ, ಜಾತಿವಾದಿ ನಿಲುಮೆಗಳನ್ನು ಪ್ರತಿರೋಧಿಸಲು ಹಾಗೂ ಜನತೆಯ ಹಕ್ಕೊತ್ತಾಯಗಳನ್ನು ಮಂಡಿಸುವ ಭಾಗವಾಗಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.

ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಬಗರ್​ ಹುಕುಂ ಹಾಗೂ ಅರಣ್ಯ ಭೂಮಿ ಸಾಗವಳಿ ನಿರತ ಬಡವರನ್ನು ಅವರ ಜಮೀನುಗಳಿಂದ ಒಕ್ಕಲೆಬ್ಬಿಸಿ ಬಂಡವಾಳಶಾಹಿಗಳಿಗೆ ದಾನ ಕೊಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರೀಮಂತರಿಗೆ ಲಾಂತರ ಕೋಟಿ ರೂ. ಸಹಾಯಧನ ಒದಗಿಸುತ್ತವೆ ಎಂದು ದೂರಿದರು.

ಕಾರ್ಮಿಕರಿಗೆ ಮಾಸಿಕ ಕನಿಷ್ಠ ವೇತನ ಹೆಚ್ಚಳಕ್ಕೆ ಕ್ರಮ ವಹಿಸುತ್ತಿಲ್ಲ. ಅವರ ದುಡಿಮೆಯ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿವೆ. ಕಾರ್ಮಿಕರ ಹೋರಾಟದ ಹಕ್ಕು ದಮನ ಮಾಡುತ್ತಿರುವುದು, ವಿವಿಧ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜಕೀಯ ಪ್ರಚಾರಾಂದೋಲನ ನಡೆಸಲಾಗುತ್ತಿದೆ ಎಂದು ಹೇಳಿದರು.

ಸದಸ್ಯರಾದ ಭೀಮರಾಯ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಸುರೇಖಾ ರಜಪೂತ, ಸುರೇಶ ಜಿ.ಬಿ., ಲಕ್ಷ$್ಮಣ ಹಂದ್ರಾಳ, ಅಣ್ಣಾರಾಯ ಈಳಗೇರ, ಭಾರತಿ ವಾಲಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net