ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ

3BLH6
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಿತ್ತೂರು ರಾಣಿ ಚನ್ನಮ್ಮ ಕಿವುಡ ಮತ್ತು ಮೂಕರ ಸಂಘದಿಂದ ಬೈಲಹೊಂಗಲ ಉಪವಿಭಾಗಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸುರೇಶ ಗೋಕಾಕ, ಸಿದ್ದಲಿಂಗ, ಮಹಾಂತ ಶಾಸ್ತ್ರೀ ಆರಾದ್ರಿಮಠ ಸೇರಿ ಇತರರು ಇದ್ದರು.
Published on

ಬೈಲಹೊಂಗಲ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಿತ್ತೂರು ರಾಣಿ ಚನ್ನಮ್ಮ ಕಿವುಡ ಮತ್ತು ಮೂಕರ ಸಂಘದಿಂದ ಉಪವಿಭಾಗಧಿಕಾರಿಗಳ ಮೂಲಕ ಸಿಎಂಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೋಕಾಕ, ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಮುಖಂಡ ಸಿದ್ದಲಿಂಗ ಮತ್ತು ಮಹಾಂತ ಶಾಸ್ತ್ರೀ ಆರಾದ್ರಿಮಠ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣದ ಶ್ರೀ ಕರೆಮ್ಮದೇವಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ 350ಕ್ಕೂ ಹೆಚ್ಚಿನ ಜನ ಸಂಘಟಿತ ಕಿವುಡರು ಮತ್ತು ಮೂಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ಸರ್ಕಾರ ಉದ್ಯೋಗ ನೀಡಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಹಾಗೂ ನಿಗಮ ಮಂಡಳಿಯಿಂದ ಆರ್ಥಿಕ ಸಹಾಯ ಒದಗಿಸಬೇಕು. ತ್ರಿಚಕ್ರವಾಹನ, ಮೊಬೈಲ್, ಹೊಲಿಗೆ ಯಂತ್ರ ಸೇರಿ ಇನ್ನಿತರ ಸೌಲಭ್ಯ ಕೊಡಬೇಕು. ಪಟ್ಟಣದಲ್ಲಿ ಕಿವುಡ ಮೂಖರಿಗಾಗಿ ಸಭೆ ಸೇರಲು ಸಮುದಾಯ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಕಿತ್ತೂರು ರಾಣಿ ಚನ್ನಮ್ಮ ಕಿವುಡ ಮತ್ತು ಮೂಖರ ಸಂಘದ ತಾಲೂಕಾಧ್ಯಕ್ಷ ಮಹೇಶ ಭಜಂತ್ರಿ, ಉಪಾಧ್ಯಕ್ಷ ಯಮನಪ್ಪ ಮಾದರ, ಕಾರ್ಯದರ್ಶಿ ಪ್ರಕಾಶ ಕೊಟಬಾಗಿ, ಪ್ರಕಾಶ ಬೆಟಗೇರಿ, ವಿಜಯ ರುದ್ರಾಪೂರ, ಮಹಾಂತೇಶ ಕಮ್ಮಾರ, ನಾಗರಾಜ ಮಾದರ, ಇಸ್ಮಾಯಿಲ್ ಮುಲ್ಲಾ, ಬಸವರಾಜ ಕೆಂದ್ರಿ, ಹನುಮಂತ ದ್ಯಾಮಕ್ಕನವರ, ದಾದಾಪೀರ ಸಂಗೊಳ್ಳಿ, ಬಸಯ್ಯ ಪೂಜೇರಿ, ಪುಂಡಲೀಕ ಸಾವಂತ್ರಿ, ಸೋಮಲಿಂಗ ಹಾಗೂ ತಾಲೂಕಿನ ನೂರಾರು ಕಿವುಡ ಮತ್ತು ಮೂಖರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net