

ಗೋಕಾಕ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೆತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಉಪತಹಸೀಲ್ದಾರ್ ಎಸ್.ಬಿ.ಕಟ್ಟಿಮನಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಮಾತನಾಡಿ, ಅನಾವಷ್ಟಿಯಿಂದ ತತ್ತರಿಸುತ್ತಿರುವ ರಾಜ್ಯದಲ್ಲಿ ತಮಿಳುನಾಡಿಗೆ ನೀರು ಬಿಟ್ಟು ರೈತರಿಗೆ ದ್ರೋಹ ಎಸಗಿದ್ದಾರೆ. ಬರ ಪ್ರದೇಶವೆಂದು ಘೋಷಣೆ ಮಾಡಬೇಕು. ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ 25 ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು. ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಪೂರೆಕೆ ಮಾಡಬೇಕು. ಮಹದಾಯಿ ಹಾಗೂ ಮೇಕೆದಾಟು ಯೋಜನೆ ಶೀಘ್ರ ಕೆಗೆತ್ತಿಕೊಳ್ಳಬೇಕು ಎಂದರು.
ಜಿಲ್ಲಾಧ್ಯಕ್ಷ ಶಂಕರ ಮದಹಳ್ಳಿ, ತಾಲೂಕಾಧ್ಯಕ್ಷ ರಮೇಶ ಗೂದಿಗೊಪ್ಪ, ಮುದಕಪ್ಪ ಗೌಡಪ್ಪನವರ, ಅವಿನಾಶ ಖಾನಪ್ಪನ್ನವರ, ಮಲ್ಲಪ್ಪ ಬಂಡಿ, ಸೋಮಪ್ಪ ಬಬಲಿ, ವೆಂಕಪ್ಪ ಕೊಪ್ಪದ, ಭೀಮಶಿ ಕೊಳವಿ, ಸಿದ್ದಪ್ಪ ಡೊಳ್ಳಿ, ಲಕ್ಷ್ಮಣ ಹಳ್ಳೂರ, ಸಿದ್ದಪ್ಪ ಮರ್ದಿ, ಮಾಳಪ್ಪ ಬಗಟಿ, ರಾಯಪ್ಪ ಚಿಪ್ಪಲಕಟ್ಟಿ, ಬಾಳು ಮರೆಪ್ಪಗೋಳ, ಹನುಮಂತ ಹುಚ್ಚೇರಿ, ಸಿದ್ದಪ್ಪ ಕಣವಿ, ಶಿವಪ್ಪ ಹೊಸಮನಿ, ನಾಗಪ್ಪ ಗಂಗಪ್ಪಗೋಳ, ಅಶೋಕ ಬಂಡಿವಡ್ಡರ, ಲಕ್ಷ್ಮಣ ಹೂಲಿಕಟ್ಟಿ ಇದ್ದರು.