ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

0102
Published on

ಬೆಳಗಾವಿ: ಪಿಒಪಿ ಗಣೇಶ ವಿಗ್ರಹಗಳನ್ನು ನಿಷೇಧಿಸಿದ ಜಿಲ್ಲಾಡಳಿತದ ಕ್ರಮ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರದ ಶಹಾಪುರದ ಮಧ್ಯವರ್ತಿ ಗಣೇಶೋತ್ಸವ ಮಹಾಮಂಡಳದ ವತಿಯಿಂದ ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಡಳಿತವು ಗಣೇಶೋತ್ಸವ ಆಚರಣೆಯ ಕುರಿತು ನಡೆಸಿದ ಪೂರ್ವಭಾವಿ ಸಭೆಗೆ ಶಹಾಪುರ ವಿಭಾಗದ ಗಣೇಶ ಮಂಡಳದ ಪದಾಧಿಕಾರಿಗಳನ್ನು ಆಹ್ವಾನಿಸಿಲ್ಲ. ಅಲ್ಲದೆ ಜಿಲ್ಲಾಡಳಿತ ಪಿಒಪಿ ಗಣೇಶ ಮೂರ್ತಿ ನಿಷೇಧಗೊಳಿಸಿದರೆ, ಈಗಾಗಲೇ ಮೂರ್ತಿಗಳನ್ನು ತಯಾರಿಸಿದ ಮೂರ್ತಿಕಾರರಿಗೆ ತೊಂದರೆಯಾಗುತ್ತದೆ. ಅಲ್ಲದೇ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ನಗರದ ಹೊಂಡಗಳು, ಕೆರೆಗಳನ್ನು ಮಹಾನಗರ ಪಾಲಿಕೆಯು ಕೂಡಲೇ ಸರಿಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಶಹಾಪುರ ಮಧ್ಯವರ್ತಿ ಗಣೇಶೋತ್ಸವ ಮಹಾಮಂಡಳ ಅಧ್ಯ ನೇತಾಜಿ ಜಾಧವ, ಕಾರ್ಯದರ್ಶಿ ರಮೇಶ ಸೊಂಟಕ್ಕಿ, ಉಪಾಧ್ಯ ಅಶೋಕ ಚಿಂಡಕ, ರಾಜು ಸುತಾರ, ರಾವಬಹದ್ದೂರ ಕದಂ, ಬಾಬುರಾವ ಕಂಗ್ರಾಳ್ಕರ್​, ಮಂಗೇಶ ನಾಗೋಜಿಚೆ, ರಾಜು ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net