ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

19 lxr 2
Published on

ಲಕ್ಷ್ಮೇಶ್ವರ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತಿರುವ ವೈದ್ಯರು, ನರ್ಸ್​ಗಳು ಮತ್ತು ಇತರೆ ಸಿಬ್ಬಂದಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಒಟ್ಟು 30 ಸಾವಿರಕ್ಕೂ ಹೆಚ್ಚು ಜನರು 10 ವರ್ಷಗಳಿಂದ ಪರಿಷ್ಕೃತ ವೇತನ, ಸೇವಾ ಸೌಲಭ್ಯ, ಸೇವಾ ಭದ್ರತೆ ಸೇರಿ ಯಾವುದೇ ಸೌಲಭ್ಯವಿಲ್ಲದೆ ಸೇವೆ ಸಲ್ಲಿಸುತ್ತಿದ್ದೇವೆ. ಆದ್ದರಿಂದ ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವೆ ಕಾಯಂ ಮಾಡುವುದು ಸೇರಿ 14 ಬೇಡಿಕೆಗಳನ್ನು ಈಡೇರಿಸಬೇಕು. ಮೇ 12 ರಿಂದ ಮೇ 22 ರವರೆಗೆ ಕಪ್ಪುಬಟ್ಟೆ ಧರಿಸಿ ಕೆಲಸ ಮಾಡುತ್ತಿದ್ದೇವೆ. ಮೇ 22 ರ ನಂತರವೂ ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.

ಡಾ.ವಿ.ಎಫ್. ಪಾಟೀಲ, ಡಾ. ಪುಷ್ಪಾವತಿ, ಡಾ. ಗುರುರಾಜ, ರವಿಕುಮಾರ ಕೊಪ್ಪದ, ಫಕೀರೇಶ ಜಂತ್ಲಿ, ಈಶ್ವರಯ್ಯ ಹಿರೇಮಠ, ಶ್ವೇತಾಕುಮಾರಿ ಬಿ.ಸಿ, ವಿಜಯ ಮಾಂಡ್ರೆ, ವೀರನಗೌಡ ರಾಮನಗೌಡ್ರ, ಆಶಾ ಭಂಡಾರಿ, ಸಂಧ್ಯಾ ಮಲ್ಲಾಪೂರ, ಇಮ್ತಿಯಾಜ್ ಕುಡಚಿ, ಸಚಿನ್ ಮತ್ತಿತರರಿದ್ದರು. ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ ಮನವಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net