

ಬೈಲಹೊಂಗಲ: ಪತ್ರಕರ್ತರಿಗೆ ನಿವೇಶನ ಹಾಗೂ ಪತ್ರಿಕಾ ಏಜೆಂಟರು, ವಿತರಕ ಹುಡುಗರಿಗೆ ಸೈಕಲ್, ರೇನ್‌ಕೋರ್ಟ್ ಪೂರೈಸಬೇಕು ಎಂದು ಒತ್ತಾಯಿಸಿ ಬೈಲಹೊಂಗಲ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ಶಾಸಕರ ನಿವಾಸಕ್ಕೆ ತೆರಳಿದ ಪತ್ರಕರ್ತರು, ಏಜೆಂಟರು, ವಿತರಕ ಹುಡುಗರು ತಮಗಾಗುತ್ತಿರುವ ತೊಂದರೆ, ಸಮಸ್ಯೆಗಳನ್ನು ಶಾಸಕರಿಗೆ ತಿಳಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಮನವಿ ಸ್ವೀಕರಿಸಿ ಮಾತನಾಡಿ, ಪತ್ರಕರ್ತರ ಸಂಘದ ಸದಸ್ಯರು ನೀಡಿದ ಮನವಿಗೆ ಸ್ಪಂದಿಸಿ ತುರ್ತು ಅಗತ್ಯ ಇರುವ ಸೈಕಲ್, ರೇನ್‌ಕೋರ್ಟ್ ಪೂರೈಸಲಾಗುವುದು. ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಏಜೆಂಟರಾದ ಕುಮಾರ ರೇಶ್ಮಿ, ಶರೀಫ್ ನದಾಫ್, ಪ್ರಕಾಶ ಕಲಾದಗಿ, ವಿಠ್ಠಲ ಕಲಾದಗಿ, ರವಿ ಕಲಾದಗಿ, ಪತ್ರಕರ್ತರಾದ ಮಹಾಂತೇಶ ರಾಜಗೋಳಿ, ರವಿಕಿರಣ ಯಾತಗೇರಿ, ರಾಜು ಬಡಿಗೇರ, ಯುನಸ್ ಬಡೆಘರ, ರವಿ ಹುಲಕುಂದ, ಗುರು ಕಡತನಾಳ, ಶಿವು ಬಿಸಗುಪ್ಪಿ ಇತರರು ಇದ್ದರು.