ವಿವಿಧ ಬೇಡಿಕೆ ಈಡೇರಿಕೆಗಾಗಿ ಎಸಿಗೆ ಕರವೇ ಕಾರ್ಯಕರ್ತರ ಮನವಿ

Various demand, AC, Karaway workers, Sindagi, Indi, Alamela, Devarahipparagi, Chadchan, Taluk
ಇಂಡಿ ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು. ಶ್ರೀಶೈಲ ಮುಳಜಿ, ಶಿವಾನಂದ ಮಲಕಗೊಂಡ, ಯಾಜ ಬಾಗವಾನ, ಸದ್ದಾಂ ಆಲಗೂರ, ಅಶೋಕ ಭೂಸನೂರ ಇತರರಿದ್ದರು.
Published on

ಇಂಡಿ: ಅಖಂಡ ಇಂಡಿ ಹಾಗೂ ಸಿಂದಗಿ ತಾಲೂಕುಗಳನ್ನು 371 (ಜೆ) ಗೆ ಸೇರಿಸಬೇಕು, ಇಂಡಿ ಪ್ರತ್ಯೇಕ ಜಿಲ್ಲೆ ಘೋಷಿಸುವುದು, ಬಜೆಟ್‌ನಲ್ಲಿ ಈ ಭಾಗಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ, ಕರವೇ ತಾಲೂಕಾಧ್ಯಕ್ಷ ಶಿವಾನಂದ ಮಲಕಗೊಂಡ, ಯಾಜ ಬಾಗವಾನ, ಸದ್ದಾಂ ಆಲಗೂರ, ಅಶೋಕ ಭೂಸನೂರ, ಬಸವರಾಜ ಮಾರಲಭಾವಿ, ಸುನೀಲ ಮಾಗಿ ಮಾತನಾಡಿ, ಇಂಡಿ ಕೇಂದ್ರ ಸ್ಥಾನವಾಗಿಟ್ಟುಕೊಂಡು ಜಿಲ್ಲಾ ಕೆಂದ್ರವಾಗಿ ಘೋಷಣೆ ಮಾಡಬೇಕು. ಈಗಾಗಲೇ ಇಂಡಿಯಲ್ಲಿ ಉಪವಿಭಾಗವಿದ್ದು ಬಹುತೇಕ ಜಿಲ್ಲಾ ಮಟ್ಟದ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ ಸಾರಿಗೆ ವ್ಯವಸ್ಥೆಗಾಗಿ ಎರಡು ಹೆದ್ದಾರಿಗಳು, ರೈಲು ನಿಲ್ದಾಣದ ವ್ಯವಸ್ಥೆ ಇದೆ. ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಚಡಚಣ ತಾಲೂಕುಗಳ ಮಧ್ಯಭಾಗದಲ್ಲಿ ಇಂಡಿ ಇರುವ ಕಾರಣ ಎಲ್ಲ ತಾಲ್ಲೂಕಿನವರಿಗೆ ಬಂದು ತಮ್ಮ ಕೆಲಸ ಕಾರ್ಯ ಮುಗಿಸಿಕೊಂಡು ಹೋಗಲು ಅನುಕೂಲವಾಗುತ್ತದೆ ಎಂದರು.

ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮನವಿ ಸ್ವೀಕರಿಸಿ ಮಾತನಾಡಿ, ತಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡುವುದಾಗಿ ತಿಳಿಸಿದರು. ಅಪ್ಪು ಪವಾರ, ಶಿವು ಬಗಲಿ, ಮಾದೇವ ರಾಮಗೊಂಡ, ಮಂಜುನಾಥ ತೇಲಿ, ಮಲ್ಲನಗೌಡ ಪಾಟೀಲ, ರಾಘು ಕೋಣಶಿರಸಗಿ, ದಯಾನಂದ ಉಮರಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net