ವಿವಿಧ ಪಕ್ಷ, ರಾಜಕೀಯ ನಾಯಕರ ಫ್ಲೆಕ್ಸ್‌ಗಳ ತೆರವು

29kglphoto5.......
Published on

ಕೊಳ್ಳೇಗಾಲ: ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಬುಧವಾರ ನಗರದ ಪ್ರಮುಖ ರಸ್ತೆಗಳ ಸುತ್ತುಗೋಡೆ, ಸರ್ಕಾರಿ ಕಚೇರಿ ಹಾಗೂ ಫ್ಲೆಕ್ಸ್ ಬೋರ್ಡ್‌ಗಳಲ್ಲಿ ಪ್ರದರ್ಶಿಸಲಾಗಿದ್ದ ರಾಜಕೀಯ ನಾಯಕರು ಹಾಗೂ ವಿವಿಧ ಪಕ್ಷಗಳ ಚಿಹ್ನೆಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.

ನೀತಿ ಸಂಹಿತೆ ಜಾರಿಯಾದ ವಿಚಾರ ತಿಳಿಯುತ್ತಿದಂತೆ ನಗರಸಭಾ ಆಯುಕ್ತ ರಾಜಣ್ಣ, ಪರಿಸರ ಅಭಿಯಂತರ ಪ್ರಸನ್ನಕುಮಾರ್, ಆರೋಗ್ಯ ನಿರೀಕ್ಷಕ ಚೇತನ್, ನೌಕರರಾದ ರಮೇಶ್, ಪ್ರದೀಪ್, ಉಮೇಶ್ ರಸ್ತೆಗಳಿದು ರಾಜಕಾರಣಿಗಳು ಹಾಗೂ ಪಕ್ಷಗಳ ಫ್ಲೆಕ್ಸ್, ಬ್ಯಾನರ್, ಬಂಟಿಗ್ಸ್ ಗಳನ್ನು ತೆರವುಗೊಳಿಸಿದರು.

ಡಾ.ಬಿ.ಅಂಬೇಡ್ಕರ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ ಬದಿ ಅಂಟಿಸಿದ್ದ ಫ್ಲೆಕ್ಸ್ ಹಾಗೂ ಬಂಟಿಗ್ಸ್ ತೆರವು ಮಾಡಲಾಯಿತು. ತಾಲೂಕು ಕಚೇರಿ, ತಾಪಂ ಕಚೇರಿ, ಸರ್ಕಾರಿ ಉಪವಿಭಾಗ ಆಸ್ಪತ್ರೆ , ಬಸ್ ನಿಲ್ದಾಣದಲ್ಲಿ ಅಳವಡಿಸಿದ್ದ ಸರ್ಕಾರಿ ಯೋಜನೆಗಳ ಮಾಹಿತಿಯುಳ್ಳ ಬ್ಯಾನರ್‌ಗಳನ್ನು ತೆರವು ಮಾಡಿದರು. ಗೋಡೆ ಬರಹಗಳಿಗೆ ಬಣ್ಣ ಬಳಿದರು.

ಆರೋಗ್ಯ ನಿರೀಕ್ಷಕ ಚೇತನ್ ಮಾತನಾಡಿ, ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಮುಖಪುಟ ಹಾಗೂ ವಿವಿಧ ಪಕ್ಷಗಳ ಚಿಹ್ನೆ ಹಾಗೂ ಪ್ರಚಾರ ಫಲಕಗಳು, ಫ್ಲೆಕ್ಸ್‌ಗಳನ್ನು ತೆಗೆದು ಹಾಕಲಾಗಿದೆ. ಬುಧವಾರವೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net