

ಕೊಳ್ಳೇಗಾಲ: ಬಿಜೆಪಿಯ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಜನೋಪಯೋಗಿ ಯೋಜನೆಗಳಿಗಾಗಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಕೊಳ್ಳೇಗಾಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಿವಾಸದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಗರಪುರ ಪಂಚಾಯಿತಿ ಆಲಹಳ್ಳಿ ಗ್ರಾಮದ ಲಿಂಗಾಯತ ಸಮಾಜದ 20ಕ್ಕೂ ಹೆಚ್ಚು ಮುಖಂಡರು ಹಾಗೂ ಯುವಕರು ನನ್ನ ಮೇಲಿನ ವಿಶ್ವಾಸಕ್ಕೆ ಪಕ್ಷ ಸೇರಿದ್ದಾರೆ. ಈ ಬಾರಿ ಕ್ಷೇತ್ರದ ಜನರು ಕಾಂಗ್ರೆಸ್ ಪರವಾಗಿದ್ದಾರೆ. ಪಕ್ಷವನ್ನು ಖಂಡಿತವಾಗಿಯೂ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಲಿಂಗಾಯತ ಸಮಾಜದ ವಿವೇಕ್, ಹರ್ಷವರ್ಧನ್, ಸಂಜನ್, ಪ್ರದೀಪ್, ನಿರಂಜನ್, ಪವನ್, ಕುಮಾರ್, ಪವನ್, ಗೋಪಿ, ಸಂಜಯ್, ಚೇತನ್, ಪ್ರಕಾಶ್, ನಟರಾಜು, ಚಿಕ್ಕ ಬಸವಯ್ಯ, ರೇವಣ್ಣ, ಯೋಗೇಶ್, ಸುರೇಶ್, ಕಿರಣ್, ಸಂಜು, ಜೀವನ್, ನಿಖಿಲ್, ಶಿವು, ಚಂದನ್, ಅಭಿಷೇಕ್, ಮಹದೇವ ಪ್ರಭು, ಮಹದೇವಸ್ವಾಮಿ, ಅಜಯ್, ಸಚಿನ್ ಕಾಂಗ್ರೆಸ್ ಸೇರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ನಗರಸಭೆ ಸದಸ್ಯ ಶಾಂತರಾಜು, ತಿಮ್ಮರಾಜೀಪುರ ಗ್ರಾಪಂ ಮಾಜಿ ಅಧ್ಯಕ್ಷ ರಾಜು, ಮುಖಂಡ ಮಹದೇವಪ್ಪ , ಅನ್ಸರ್ ಬೇಗ್, ಕಿನಕಹಳ್ಳಿ ಪ್ರಭು ಪ್ರಸಾದ್, ಸ್ವಾಮಿ ನಂಜಪ್ಪ, ಸಿದ್ದಯ್ಯ, ವರದರಾಜ್ ಮೋಳೆ ಕೇಶವ್ ಮೂರ್ತಿ ಮತ್ತಿತರಿದ್ದರು.