ವಿವಿಧ ಗ್ರಾಮಗಳಲ್ಲಿ ಹನುಮ ಜಯಂತಿ

ವಿವಿಧ ಗ್ರಾಮಗಳಲ್ಲಿ ಹನುಮ ಜಯಂತಿ
Published on

ಅರಕಲಗೂಡು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹನುಮ ಜಯಂತಿಯನ್ನು ಸೋಮವಾರ ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.


ಮಲ್ಲರಾಜಪಟ್ಟಣ, ಶ್ರೀ ಅಂಜನೇಯಸ್ವಾಮಿ, ರುದ್ರಪಟ್ಟಣ, ಕೇರಳಾಪುರ ಹಾಗೂ ಮಲ್ಲಿಪಟ್ಟಣದ ಶಿರದನಹಳ್ಳಿ ಮಾರುತಿ ಬಡಾವಣೆಯ ಶ್ರೀ ಹನುಮಂತಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜಾ ವಿಧಾನಗಳು ವಿದಿವತ್ತಾಗಿ ನಡೆದವು.

ದೇವಸ್ಥಾನಗಳನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ ದೇವರ ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಿ ಸಿಂಗರಿಸಲಾಗಿತ್ತು. ಅಪಾರ ಭಕ್ತರು ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯ ಅಪಾರ ಭಕ್ತರು ಭಾಗವಹಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ದೇವರ ದರ್ಶನ ಪಡೆದು ಧನ್ಯತಾಭಾವ ಹೊಂದಿದರು.


ಭಕ್ತರಿಗೆ ಸಾಮೂಹಿಕ ಅನ್ನ ಸಂತರ್ಪಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net