ವಿವಿಧ ಗ್ರಾಮಗಳಲ್ಲಿ ಪೌತಿ ಖಾತೆ ಆಂದೋಲನ

ವಿವಿಧ ಗ್ರಾಮಗಳಲ್ಲಿ ಪೌತಿ ಖಾತೆ ಆಂದೋಲನ
Published on

ಅರಕಲಗೂಡು: ತಾಲೂಕಿನ ವಿವಿಧ ಗ್ರಾಮಗಳಿಗೆ ತಹಸೀಲ್ದಾರ್. ಕೆ.ಆರ್. ಶ್ರೀನಿವಾಸ್ ಗುರುವಾರ ಭೇಟಿ ನೀಡಿ ಪೌತಿ ಖಾತೆ ಆಂದೋಲನ ನಡೆಸಿದರು.

ದೊಡ್ಡಮಗ್ಗೆ ಹೋಬಳಿಯ ದಡದಹಳ್ಳಿ, ಪಾರಸನಹಳ್ಳಿ, ದುಮ್ಮಿ ಮತ್ತು ಕಸಬಾ ಹೋಬಳಿಯ ನರಸಿನಕುಪ್ಪೆ ಗ್ರಾಮಗಳಿಗೆ ತೆರಳಿ ರೈತರ ಕುಂದು ಕೊರತೆಗಳನ್ನು ಆಲಿಸಿದರು. ದಡದಹಳ್ಳಿ ಗ್ರಾಮಕ್ಕೆ ಮೂರನೇ ಬಾರಿ ಭೇಟಿ ನೀಡಿ ಸಂದರ್ಭದಲ್ಲಿ ರೈತರು ಎರಡು ಮೂರು ತಲೆ ಮಾರುಗಳಿಂದ ಬದಲಾಯಿಸಿಕೊಳ್ಳದ ಜಮೀನಿನ ಹಕ್ಕುಗಳನ್ನು ಖಾತೆ ಮಾಡಿಸಿಕೊಳ್ಳಲು ಸೂಚಿಸಿದರು.


ವಿವಿಧ ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ರೈತರು ಸ್ಥಳದಲ್ಲಿಯೇ ವಂಶವೃಕ್ಷ ಬರೆಸಿ, ಖಾತೆ ಮಾಡಲು ದಾಖಲೆ ನೀಡಿದರು.


ರಾಜಸ್ವ ನೀರಿಕ್ಷಕ ರಾಘವೇಂದ್ರ, ಗ್ರಾಮ ಲೆಕ್ಕಾಧಿಕಾರಿ ಲತೇಶ್, ವಿನಾಯಕ್, ಗ್ರಾಮ ಸಹಾಯಕರು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net