

ಮೈಸೂರು: ರಾಜಧಾನಿ ಬೆಂಗಳೂರಿನಲ್ಲಿ ಅಣಬೆಗಳಂತೆ ವಿಶ್ವವಿದ್ಯಾಲಯಗಳು ತಲೆ ಎತ್ತಿವೆ. ಆದರೆ ವಿದ್ಯಾರ್ಥಿಗಳು ಪದವಿ ಪಡೆದ ಬಳಿಕ ಉದ್ಯೋಗ ಗಿಟ್ಟಿಸಿಕೊಂಡು ಬದುಕು ಕಟ್ಟಿಕೊಳ್ಳಲು ಅನುಕೂಲಕರವಾದಂತಹ ಉದ್ಯೋಗಾಧಾರಿತ ಕೋರ್ಸ್‌ಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹವನ್ನು ಉಣಬಡಿಸುತ್ತಿದೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ.
ಬೆಂಗಳೂರಿನ ರಾಜನಗುಂಟೆ ಯಲಹಂಕದಲ್ಲಿರುವ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ 13 ವರ್ಷಗಳ ಹಿಂದೆ ಆರಂಭವಾಗಿದೆ. ಆದರೆ ಶಾಲಾ-ಕಾಲೇಜುಗಳನ್ನು ಆರಂಭಿಸಿ ನಾಲ್ಕೂವರೆ ದಶಕಗಳಾಗಿವೆ. ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದಂತಹ ಛಾಪನ್ನು ಹೊಂದಿದ್ದ ಈ ಸಂಸ್ಥೆಗೆ ಪ್ರೆಸಿಡೆನ್ಸಿ ಖಾಸಗಿ ವಿವಿ ಆರಂಭಿಸಲು ಅನುಮತಿ ದೊರೆಯಿತು.
ಅಂದಹಾಗೆ ಈ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಕೋರ್ಸ್‌ಗಳು, ಸ್ಕೂಲ್ ಆಫ್ ಇನ್‌ಫರ್ಮೇಶನ್‌ನಲ್ಲಿ ಬಿಸಿಎ ಮತ್ತು ಎಂಸಿಎ ಕೋರ್ಸ್‌ಗಳು, ವಾಣಿಜ್ಯ ವಿಭಾಗದಲ್ಲಿ ಕಾಮರ್ಸ್ ಮತ್ತು ಬಿ.ಎಸ್ಸಿ ಎಕನಾಮಿಕ್ಸ್, ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಬಿಬಿಎ, ಎಂಬಿಎ ಕೋರ್ಸ್‌ಗಳು, ಕಾನೂನು ವಿಭಾಗದಲ್ಲಿ ಬಿಎ ಎಲ್‌ಎಲ್‌ಬಿ, ಬಿಕಾಂ ಎಲ್‌ಎಲ್‌ಬಿ, ಎಲ್‌ಎಲ್‌ಎಂ ಕೋರ್ಸ್‌ಗಳು ಲಭ್ಯವಿವೆ. ಕಲಾ ವಿಭಾಗದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ ಕೋರ್ಸ್ ಸಹ ಇದೆ.
ಜೆಇ, ಕಾಮೆಡ್-ಕೆ, ಸಿಎಟಿ, ಎಂಎಟಿ ಪ್ರವೇಶಾತಿ ಪರೀಕ್ಷೆಗಳನ್ನು ಬರೆದು ವಿದ್ಯಾರ್ಥಿಗಳು ಗಳಿಸಿದ ಅಂಕಗಳಿಗೆ ಅನುಸಾರವಾಗಿ ವಿವಿಯಲ್ಲಿ ಸೀಟುಗಳನ್ನು ಗಿಟ್ಟಿಸಬಹುದಾಗಿದೆ. ವಿವಿಯಲ್ಲಿ ಪ್ರತಿ ವರ್ಷ 6 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 400ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆ ಗುರುತನ್ನು ವಿವಿಯು ಹೊಂದಿದೆ ಎನ್ನುತ್ತಾರೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸಿಬ್ಬಂದಿ ಕಾರ್ತಿಕ್.
‘ವಿಜಯವಾಣಿ’ ಮತ್ತು ‘ದಿಗ್ವಿಜಯ’ ವಾಹಿನಿ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ ಮತ್ತು ಭಾನುವಾರ ಹಮ್ಮಿಕೊಂಡಿರುವ ಎರಡು ದಿನಗಳ ಎಜುಕೇಶನ್ ಎಕ್ಸ್‌ಪೋ-2023 ದಲ್ಲಿ ಪ್ರೆಸಿಡೆನ್ಸಿ ಯೂನಿವರ್ಸಿಟಿಯು ಮಳಿಗೆಯನ್ನು ತೆರೆದಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತಿದೆ.