ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿಪೂಜೆ

29 crp-4 A
Published on

ಚನ್ನರಾಯಪಟ್ಟಣ: ತಾಲೂಕಿನ ಬೇಡಿಗನಹಳ್ಳಿ ಗ್ರಾಮದಲ್ಲಿ ಬುಧವಾರ ಲೋಕೋಪಯೋಗಿ ಇಲಾಖೆಯಡಿ 51ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು.

ತಾಲೂಕಿನಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳಿಗೆ ಬುಧವಾರ ಬೆಳಗ್ಗೆ 9 ಗಂಟೆಗೆ ಏಕಕಾಲಕ್ಕೆ ಬೇಡಿಗನಹಳ್ಳಿ ಗ್ರಾಮದಲ್ಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಿಡಬ್ಲುೃಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ವಿವಿಧ ಲೆಕ್ಕಶೀರ್ಷಿಕೆ ಅಡಿಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಬೇಡಿಗನಹಳ್ಳಿ ಗ್ರಾಮದಲ್ಲಿ 1.5 ಕೋಟಿ ರೂ.ವೆಚ್ಚದಲ್ಲಿ ಸೇತುವೆ, ದಾಸರಹಳ್ಳಿ-ವಡ್ಡರಹಟ್ಟಿ, ವಡ್ಡರಹಳ್ಳಿ-ಕಾಂತರಾಜಪುರ ನಡುವಿನ ರಸ್ತೆಗೆ 1ಕೋಟಿ ರೂ., ಹಿರಿಸಾವೆ-ನರಿಹಳ್ಳಿ ರಸ್ತೆಗೆ 1.5ಕೋಟಿ ರೂ., ಕುರುವಂಕ-ಹಾರೋಸೋಮನಹಳ್ಳಿ ರಸ್ತೆ 4.5ಕೋಟಿ ರೂ., ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಿಂದ ಮೈಸೂರು ರಸ್ತೆಯಲ್ಲಿನ ಕೆ.ಆರ್.ಪೇಟೆ ಗಡಿವರೆಗೂ 6ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ವಿಸ್ತರಣೆ ಸೇರಿ ನೌಕರರ ವಸತಿಗೃಹ, ಪಟ್ಟಣದಲ್ಲಿನ ಪ್ರವಾಸಿಮಂದಿರದ ನವೀಕರಣ, ಬಾಗೂರು, ಹಿರಿಸಾವೆಯಲ್ಲಿ ನೂತನ ಪ್ರವಾಸಿ ಮಂದಿರ ನಿರ್ಮಾಣ ಸೇರಿದಂತೆ 22ಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಕಾವೇರಿ ನೀರಾವರಿ ನಿಗಮದಿಂದಲೂ 25ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಕ್ರಿಯಾದೇಶವಾಗಿದ್ದು, ಜಿಲ್ಲಾಧಿಕಾರಿ ಸೂಚನೆಯಂತೆ ಕಾಮಗಾರಿ ಮಾಡಲಾಗುವುದು, ಪಿಡಬ್ಲುೃಡಿ, ಜಿಪಂ, ನರೇಗಾ, ಭೂಸೇನಾ ನಿಗಮ, ಕಾವೇರಿ ನಿಗಮಗಳಿಂದ ತಾಲೂಕಿನ ಸರ್ವಾಂಗೀಣ ರಸ್ತೆಗಳನ್ನು ಮಾಡಲಾಗಿದೆ ಎಂದರು.

ಮಾಜಿ ಉಪ ಪ್ರಧಾನ ಅಣ್ಣೇಗೌಡರು, ಗ್ರಾಪಂ ಸದಸ್ಯರಾದ ತೋಪೇಗೌಡ, ಶಂಕರ್, ಸೊಸೈಟಿ ಅಧ್ಯಕ್ಷ ಚಂದ್ರಶೇಖರ್, ಗ್ರಾಮದ ಮುಖಂಡರಾದ ದೊರೆ, ಚಂದ್ರಣ್ಣ, ಪಿಡಬ್ಲುೃಡಿ ಇಂಜಿನಿಯರ್ ಲವಕುಮಾರ್, ಸೆಸ್ಕ್ ಇಂಜಿನಿಯರ್ ಹರೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net