ವಿವಿಧ ಕಾಮಗಾರಿಗಳಿಗೆ ಶಾಸಕ ಭೂಮಿಪೂಜೆ

oplus_0
oplus_0
Published on

ಬೇಲೂರು: ತಾಲೂಕಿನ ಗರ್ಜೆ ಗ್ರಾಮದ ಅಮೃತೇಶ್ವರ ದೇಗುಲದ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಎಚ್.ಕೆ.ಸುರೇಶ್ ಭಾನುವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಗರ್ಜೆ ಗ್ರಾಮದ ಆವರಣದಲ್ಲಿ ಅಂದಾಜು 70 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದ್ದು ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು. ಮಳೆ ನಡುವೆಯೂ ನಮ್ಮ ಜನ ಸಾರ್ವಜನಿಕ ಕಾಮಗಾರಿಗಳಿಗೆ ಒತ್ತು ನೀಡುತ್ತಿದ್ದಾರೆ. ರಸ್ತೆ ದುಸ್ಥಿತಿಯಲ್ಲಿ ಇರುವುದರಿಂದ ಗ್ರಾಮಸ್ಥರ ಒತ್ತಾಸೆಯಂತೆ ಗುಣಮಟ್ಟದ ಕಾಮಗಾರಿ ಮಾಡಿಸಲಾಗುವುದು. 15 ರಿಂದ 20 ದಿನಗಳೊಳಗೆ ಕಾಮಗಾರಿ ಮುಗಿಸಲು ತಿಳಿಸಲಾಗಿದೆ. ರಸ್ತೆ ಕಾಮಗಾರಿ ಮುಗಿದ ನಂತರ ಗ್ರಾಮದ ಚರಂಡಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಅರೇಹಳ್ಳಿಯ ಅಂಬೇಡ್ಕರ್ ವೃತ್ತದಿಂದ ತೊಳಲು ಮಾರ್ಗಕ್ಕೆ ಆರಂಭದಲ್ಲಿ ಚರಂಡಿ ನಿರ್ಮಿಸಿ 1 ಕಿ.ಮೀ. ಸಿಸಿ ರಸ್ತೆ ಮಾಡಲಾಗುವುದು ಎಂದರು.

ಲಕ್ಕುಂದ ಗ್ರಾಪಂ ಅಧ್ಯಕ್ಷೆ ರಾಧಾ, ಪಿಡಿಒ ಮಂಜುನಾಥ್, ಗ್ರಾಪಂ ಸದಸ್ಯರಾದ ಯಶೋದಾ, ಮಲ್ಲೇಶ್, ಗ್ರಾಮಸ್ಥರಾದ ಸದಾಶಿವ, ವಿಜಯರಾಜು, ದಿನೇಶ್, ರವಿ, ಧರ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net