

ಶಹಾಪುರ: ಜೇವರ್ಗಿ ಮತ್ತು ಶಹಾಪುರ ತಾಲೂಕಿನ ರೈತರ ಹೊಲಗಳಿಗೆ ನೀರು ಹರಿಸುವ ಯೋಜನೆಯಾದ ಮಲ್ಲಬಾದ ಏತ ನೀರಾವರಿ ಕಾಮಗಾರಿಗೆ ೩೬೫ ಕೋಟಿ ರೂ. ಅನುದಾನ ಮಂಜೂರಾಗಿದ್ದು, ತಮ್ಮ ಮತಕ್ಷೇತ್ರದ ವಿವಿಧ ಊರುಗಳಿಗೆ ಬೇರೆ, ಬೇರೆ ಕಾಮಗಾರಿಗಳಿಗಾಗಿ ೮೭ ಕೋಟಿ ರೂ.ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಶನಿವಾರ ಸನ್ನತಿ ಸೇತುವೆ ಸೇರಿ ವಿವಿಧೆಡೆ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಈ ಕೆಲಸಗಳ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರ ಕರೆಸಿ ಚಾಲನೆ ನೀಡಲಾಗುವುದು ಎಂದರು.
ತಾಲೂಕಿನ ಶಿರವಾಳ ಮತ್ತು ಉಕ್ಕಿನಾಳ ೩೦ ಕೋಟಿ ರೂ. ವೆಚ್ಚದಲ್ಲಿ ಮೂರಾರ್ಜಿ ವಸತಿ ಶಾಲೆ ಟೆಂಡರ್ ಆಗಿದ್ದು, ಕಟ್ಟಡದ ಕಾಮಗಾರಿಯ ಸ್ಥಳ ಸ್ವಚ್ಛಗೊಳಿಸಲಾಗಿದೆ. ಸಗರ ಗ್ರಾಮದಲ್ಲಿ ೨೧ ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ಟೆಂಡರ್ ಅಡಿಗಲ್ಲು, ೯ ಕೋಟಿ ರೂ, ವೆಚ್ಚದಲ್ಲಿ ಮೈನಾರಿಟಿ ಬಾಲಕಿಯರ ಮತ್ತು ಬಾಲಕರ ವಸತಿ ನಿಲಯ, ೪ ಕೋಟಿ ರೂ. ವೆಚ್ಚದಲ್ಲಿ ಶಾಲಾ ಕೋಣೆಗಳು, ೨ ಕೋಟಿ ರೂ. ವೆಚ್ಚದಲ್ಲಿ ಕಂಪೌAಡ್ ಸುತ್ತುಗೋಡೆ ನಿರ್ಮಾಣ, ನಗರದಲ್ಲಿ ಮೌಲಾನಾ ಆಜಾದ್ ವಸತಿ ಶಾಲೆಗೆ ಮೈನಾರಿಟಿ ಇಲಾಖೆಯಡಿಯಲ್ಲಿ ೫ ಕೋಟಿ ರೂ. ಮಂಜೂರಿಯಾಗಿದೆ. ಪ್ರಜಾಸೌಧ ನಿರ್ಮಾಣಕ್ಕೆ ೧೬ ಕೋಟಿ ರೂ. ಟೆಂಡರ್ ಕರೆಯಲಾಗಿದೆ. ೩೫೬ ಕೋಟಿ ರೂ. ವೆಚ್ಚದಲ್ಲಿ ಮಲ್ಲಾಬಾದ ಏತನೀರಾವರಿ ಕಾಮಗಾರಿಗೆ ಅನುದಾನ ಮಂಜೂರಿಯಾಗಿದೆ. ಈಗೆ ವಿವಿಧ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಕರೆಯಿಸಿ ಬೃಹತ್ ಕಾರ್ಯಕ್ರಮ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಕುಡಿಯುವ ನೀರು ಯೋಜನೆ: ನಗರಕ್ಕೆ ಅಮೃತ ೨.೦ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಯ (ಡಿಸ್ಟಿçಬುಶನ್ ಮಾರ್ಗ) ೮೬.೮೨ ಕೋಟಿ ರೂ. ವೆಚ್ಚದಲ್ಲಿ ನಗರದ ಹಾಲಿ ಇರುವ ಜಲಶುದ್ಧೀಕರಣ ಘಟಕದಿಂದ ಅಯ್ಯಪ್ಪ ಸ್ವಾಮಿ ಗುಡಿ ಹತ್ತಿರದ ಹಾಲಿ ಪ್ರಸ್ತಾಪಿಸಿದ ೧೫ ಲಕ್ಷ ಲೀಟರ್ ಸಾಮರ್ಥ್ಯದ ಮೆಲ್ಮಟ್ಟದ ಜಲ ಸಂಗ್ರಹಗಾರದ ವರೆಗೆ ೨೫೦ ಎಂಎA ವ್ಯಾಸ ಮನೆಯವರಗೆ ಏಳು ಕೊಳವೆ ಮಾರ್ಗ ಅಳವಡಿಸುವುದು ಮತ್ತು ಆದರ್ಶ ವಿದ್ಯಾಲಯದ ಹಿಂಭಾಗದಲ್ಲಿ ೧೫ ಲಕ್ಷ ಲೀಟರ್ ಸಾಮರ್ಥ್ಯದ ೧೫ ಮೀಟರ್ ಎತ್ತರದ ಮೇಲ್ಮಟ್ಟದ ಜಲ ಸಂಗ್ರಹಗಾರದ ನಿರ್ಮಾಣ ಕಾಮಗಾರಿ. ಇದಕ್ಕಾಗಿ ೮ ಜೋನ್‌ಗಳಾಗಿ ವಿಂಗಡಿಸಲಾಗಿದ್ದು, ಹಾಲಿ ಇರುವ ಜಲ ಸಂಗ್ರಹಗಾರಗಳ ದುರಸ್ತಿ ಮಾಡಲಾಗುವುದು ಎಂದು ಅವರು ಹೇಳಿದರು.