ವಿವಿಧ ಅಭಿವೃದ್ಧಿ ನಿಗಮಗಳ ಅಧಿಕಾರಿಗಳ ನಿರ್ಲಕ್ಷೃದ ವಿರುದ್ಧ ಶಾಸಕರ ತೀವ್ರ ಆಕ್ರೋಶ ಅಸಮಾಧಾನ

CTD KDP MUNDUVARIDA....---
Published on

ಚಿತ್ರದುರ್ಗ: ಸರ್ಕಾರಿ ಸೌಲಭ್ಯಗಳ ಹಂಚಿಕೆಗೆ ‘ರೇಟ್’ಪಟ್ಟಿ ಪ್ರಕಟಿಸಿ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರು ವಿವಿಧ ಅಭಿವೃದ್ಧಿ ನಿಗಮಗ ಳ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸೋಮವಾರ ಜಿಪಂ ತ್ರೈಮಾಸಿಕ ಕೆಡಿಪಿ ಮುಂದುವರಿದ ಸಭೆಯಲ್ಲಿ ಮಾತನಾ ಡಿ,ಬಿಸಿಎಂ ಇಲಾಖೆ ವ್ಯಾಪ್ತಿಯ 12 ಅಭಿವೃದ್ಧಿ ನಿಗಮಗಳಿಗೂ ಜಿಲ್ಲೆಯಲ್ಲಿ ದೇವರಾಜ ಅರಸು ನಿಗಮದ ವ್ಯವಸ್ಥಾಪಕರು ಒಬ್ಬರೇ ಇದ್ದಾರೆ.

ಕಂಪ್ಲೆಂಟ್ ಅಧಿಕವಿರುವುದರಿಂದ ಅವರು ಸಭೆಗೆ ಗೈರಾಗಿದ್ದಾರೆ. ನಿಗಮಗಳ ಅಧಿಕಾರಿಗಳು ಏಜಂಟ್‌ರೊಂದಿಗೆ ಸೇರಿ ಬಡವರ ಜೀವ ಹಿಂಡುತ್ತಿದ್ದಾರೆ ಎಂದರು. ನಿಗಮಗಳಲ್ಲಿ ನಡೆಯುವ ವ್ಯವಹಾರಕ್ಕೆ ಕಡಿವಾಣ ಹಾಕುವಂತೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಜಲ ಜೀವನ್‌ಮಿಷನ್(ಜೆ.ಜೆ.ಎಂ)ಅಡಿ ಮನೆ,ಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಗಳ ಅನುಷ್ಠಾನ ಸ ಮರ್ಪಕವಾಗಿಲ್ಲವೆಂಬ ದೂರಿನ ತನಿಖೆಗೆ ಸಮಿತಿ ರಚಿಸಬೇಕು. 3 ತಿಂಗಳ ಒಳಗೆ ಸಮಿತಿ ವರದಿ ಸಲ್ಲಿಸಲಿ ಎಂದು ಸಚಿವರು ಡಿಸಿಗೆ ನಿರ್ದೇಶಿಸಿ ದರು.

ನಿಯಮ ಉಲ್ಲಂಘಿಸಿ ಅನುದಾನ ಬಳಸಿರುವ ಅಧಿಕಾರಿಗಳ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಆ ಗ್ರಹಿಸಿದರು.ಅವಸರ ಮಾಡದೆ ತನಿಖಾ ಸಮಿತಿ ಮುಂದಿನ ಕೆಡಿಪಿ ಸಭೆಯೊಳಗೆ ವರದಿ ಸಲ್ಲಿಸಲಿ ಎಂದು ರಘುಮೂರ್ತಿ ಹೇಳಿದರು. ಶುದ್ಧ ಕು ಡಿವ ನೀರಿನ ಘಟಕಗಳನ್ನು ಕೂಡಲೇ ದುರಸ್ಥಿಗೊಳಿಸಿ ಗ್ರಾಪಂಗಳಿಗೆ ಹಸ್ತಾಂತರಿಸುವಂತೆ ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 1056 ಆರ್‌ಒಗಳ ಪೈಕಿ 226ಕ್ಕೂ ಹೆಚ್ಚು ಘಟಕಗಳ ದುರಸ್ಥಿಗೆ 6.15 ಕೋಟಿ ರೂ.ಅನುದಾನಕ್ಕೆ ಪ್ರಸ್ತಾವನೆ ಸಲ್ಲಿ ಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆ ಇಇ ಬಸವನಗೌಡ ಪಾಟೀಲ್ ಹೇಳಿದರು. ದುರಸ್ತಿ ಮೊತ್ತ ಹಾ ಗೂ ವಿದ್ಯುತ್ ಶುಲ್ಕ ಬಾಕಿ ಕಾರಣಕ್ಕೆ ಗ್ರಾಪಂಗಳು ಆರ್‌ಒಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದು,ಸಭೆ ನಡೆಸಿ ಹಸ್ತಾಂತರಕ್ಕೆ ಕ್ರಮ ವಹಿಸು ವುದಾಗಿ ಸಿಇಒ ತಿಳಿಸಿದರು.

ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ,ನಮ್ಮ ಜಿಲ್ಲೆಯಲ್ಲಿ ಪಡಿತರ ಅಕ್ಕಿಯನ್ನು ಕಳ್ಳ ಸಾಗಾಣಿಕೆ ಪ್ರಕರಣಗಳಾಗಿವೆಯೇ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಈ ವರ್ಷ 7 ಪ್ರಕರಣಗಳನ್ನು ದಾಖಲಿಸಿದ್ದು,1 ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು ಮಾಡಲಾಗಿದೆ ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಮಾರಿಯಾಳ್ ಹೇಳಿದರು. ಕಳ ಸಾಗಾಣಿಕೆಯಡೆ ನಿಗಾಕ್ಕೆ ಸಚಿವರು ಸೂಚಿಸಿದರು.

ಕಾರ್ಮಿಕ ಇಲಾಖೆಯಲ್ಲಿ ವಿವಿಧ ಯೋಜನೆಗಳ ಸವಲತ್ತು ಪಡೆಯಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬ ಗೋವಿಂದಪ್ಪ ದೂರಿಗೆ ದ ನಿಗೂಡಿಸಿದ ರಘುಮೂರ್ತಿ ಮತ್ತು ನವೀನ್ ಅವರು,ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಅಕ್ರಮವಾಗಿದೆ ಎಂದರು.ಸಮಗ್ರ ವರದಿಗೆ ಕಾರ್ಮಿಕ ಅಧಿಕಾರಿ ಅನಿಲ ಬಾಲಚಂದ್ರ ಬಗಟಿ ಅವರಿಗೆ ಸಚಿವರು ನಿರ್ದೇಶಿಸಿದರು.

ಲೋಕೋಪಯೋಗಿ ಇಲಾಖೆ ರಾ.ಹೆ.ಹಾಗೂ ರಾ.ಹೆ.ಪ್ರಾಧಿಕಾರ ಕಾಮಗಾರಿಗಳ ಕುರಿತಂತೆ ಚರ್ಚೆ ನಡೆಯಿತು. ಈ ವೇಳೆ ಹೊಸದುರ್ಗದ ಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ,ವೃತ್ತದ ತ್ವರಿತ ಮರು ನಿರ್ಮಾಣಕ್ಕೆ ಗೋವಿಂದಪ್ಪ ಪಿಡಬ್ಲೂೃಡಿ ಇಲಾಖೆ ರಾ.ಹೆ.ಇಇ ವೆಂಕಟ ಶೇಷಾದ್ರಿ ಅವರಿಗೆ ಸೂಚಿಸಿದರು.

ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಸಭೆ ಅಸಮಾಧಾನ ವ್ಯಕ್ತಪಡಿಸಿತು.ರಸ್ತೆಗಳ ನಿ ರ್ಮಾಣ,ದುರಸ್ತಿ,ನವೀಕರಣ ವೇಳೆ ರಸ್ತೆ ಸುರಕ್ಷತೆ ಉಪಕರಣಗಳ ಅಳವಡಿಕೆಯನ್ನು ನಿರ್ಲಕ್ಷಿೃಸಲಾಗುತ್ತಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಹೇಳಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ತಿಮ್ಮಯ್ಯ,ದೀಪಿಕಾ ಸತೀಶ್,ರಂಗಸ್ವಾಮಿ,ರಾಮಸ್ವಾಮಿ ಹಾಗೂ ಅಧಿಕಾರಿಗಳಿದ್ದರು.

-----

ಸಾವೆ,ನವಣೆ,ರಾಗಿ ಖರೀದಿಗೆ ನೋಂದಣಿ

ಬೆಂಬಲ ಬೆಲೆಯಡಿ ಸಾಮೆ,ನವಣೆ ಹಾಗೂ ರಾಗಿ ಖರೀದಿಗೆ ಅಕ್ಟೋಬರ್ 1ರಿಂದ 12ರವರೆಗೆ ನೋಂದಣಿ ಹಾಗೂ 2026ರ ಜನವರಿ 1ರಿಂದ ಮಾರ್ಚ್ ಅಂತ್ಯದವರೆಗೂ ಖರೀದಿ ನಡೆಯಲಿದೆ ಎಂದು ಆಹಾರ ಇಲಾಖೆ ಜಂಟಿನಿರ್ದೇಶಕ ಸಿದ್ದರಾಮ ಮರಿಯಾಳ್ ಹೇಳಿದರು. ಸಾಮೆ ಶೀಘ್ರ ಖರೀದಿಗೆ ಗೋವಿಂದಪ್ಪ ಸೂಚಿಸಿದರು. ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದಲೂ 3773 ಪಡಿತರ ಚೀಟಿಗಳ ರದ್ಧತಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಹೊಸ ಪಡಿತರ ಚೀಟಿಗಾಗಿ 6900 ಅರ್ಜಿಗಳು ಬಾಕಿ ಇವೆ. 1500ಕ್ಕೂ ಹೆ ಚ್ಚು ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗುವುದು ಎಂದು ಮರಿಯಾಳ್ ಹೇಳಿದರು.

----

ಕೇಂದ್ರಕ್ಕೆ ಶಿಫಾರಸು ಎಚ್ಚರಿಕೆ

ಸಾಲ ಮಂಜೂರು ಮಾಡದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕೇಂದ್ರಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಎಚ್ಚರಿಸಿದರು. ಸಾಲ ಒದಗಿಸಲು ಬ್ಯಾಂಕ್‌ಗಳಿಗೆ ಶಿಫಾರಸು ಮಾಡುತ್ತಿವೆ. ಆದರೆ ಬ್ಯಾಂಕ್‌ಗಳು ಸಿಬಿಲ್ ಸ್ಕೋರ್ ನೆಪದಲ್ಲಿ ಸಾಲ ನಿ ರಾಕರಿಸುತ್ತಿವೆ ಎಂದು ಶಾಸಕರುಗಳು ಬೇಸರ ವ್ಯಕ್ತಪಡಿಸಿದರು. ಸೂಕ್ತ ಕ್ರಮಕ್ಕೆ ಲೀಡ್‌ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದ ಡಿಸಿ ಮತ್ತು ಸಿಇಒ ಬ್ಯಾಂಕ್,ವಿವಿಧ ನಿಗಮಗಳ ಅಧಿಕಾರಿಗಳ ಸಭೆಯನ್ನು ಮಂಗಳವಾರ ಪ್ರಗತಿ ಪರಿಶೀಲಿಸುವುದಾಗಿ ಹೇಳಿದರು.

----------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net