

ವಿರಾಜಪೇಟೆ: ರಾಜ್ಯ ಸರ್ಕಾರದ ಎಸ್.ಎಫ್.ಸಿ. ಅನುದಾನದಲ್ಲಿ, ವಿರಾಜಪೇಟೆ ಪುರಸಭಾ ವ್ಯಾಪ್ತಿಯ ಆಯ್ದ ವಾರ್ಡ್‌ಗಳಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.
ಪುರಸಭಾ ವ್ಯಾಪ್ತಿಯ ಜನರಿಗೆ ಅನುಕೂಲವಾಗಲಿ ಎಂದು ಶಾಸಕರು ಈ ಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಹಲವು ವಿಶೇಷ ಅನುದಾನಗಳನ್ನು ಒದಗಿಸಿದ್ದು, ಪುರಸಭಾ ವ್ಯಾಪ್ತಿಯ ಕಲ್ಲು ಬಾಣೆ, ತಿಮ್ಮಯ್ಯ ಬಡಾವಣೆ, ಶಿವಕೇರಿ, ಬೋಯಿಕೇರಿ, ಗಾಂಧಿನಗರ, ಮಹಿಳಾ ಸಮಾಜ, ಸುಣ್ಣದ ಬೀದಿ, ನಿಸರ್ಗ ಬಡಾವಣೆಗಳಿಗೆ ಇದೀಗ ಎಸ್.ಎಫ್.ಸಿ. ಅನುದಾನ ಮೂಲಕ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಜಾನ್ಸನ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮದಂಡ ತಿಮ್ಮಯ್ಯ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಪುರಸಭೆ ಮುಖ್ಯಅಧಿಕಾರಿ ನಾಚಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಲೀಲ್, ಪೂರ್ಣಿಮಾ, ಪುರಸಭೆ ಸದಸ್ಯರಾದ ದಿನೇಶ್, ಮತೀನ್, ರಾಫಿ, ರಾಜೇಶ್, ಪೃಥ್ವಿನಾಥ್, ಅತಿಫ್ ಮನ್ನ, ರವಿ, ಮೋಹನ್, ನಿಸರ್ಗ, ರಜಿನಿಕಾಂತ್, ಬೆನ್ನಿ ಆಗಸ್ಟಿಸ್ ಇತರರಿದ್ದರು.