ವಿವಿ ಸಾಗರದಲ್ಲಿ ಒಳ ಹರಿವು ಹೆಚ್ಚಳ

VV Sagara
Published on

ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಆಗಿಂದಾಗ್ಗೆ ಮಳೆಯಾಗುತ್ತಿದ್ದು, ಮಂಗಳವಾರ ಮಧ್ಯಾಹ್ನ ಕೂಡ ಕೆಲವೆಡೆ ಬಿರುಸಿನಿಂದ ಸುರಿಯಿತು. ಅಲ್ಲದೆ, ವರುಣಾಗಮನ ರೈತರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿಸಿದೆ.

ತಾಲೂಕಿನ ಹಲವೆಡೆ ಮುಂಜಾನೆಯಿಂದಲೂ ಮೊಡಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 12ರವರೆಗೂ ಜಿಟಿಜಿಟಿ, ನಂತರ 15 ನಿಮಿಷ ಬಿರುಸಾಗಿ ಸುರಿಯಿತು.

ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಮಂಗಳವಾರಕ್ಕೆ 122.60 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಒಳ ಹರಿವು ಹೆಚ್ಚಾಗಿದೆ.

ಸೋಮವಾರ ರಾತ್ರಿ ಕೂಡ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ತೋಟಗಳಲ್ಲಿ ನೀರು ನಿಂತಿರುವ ಕಾರಣ ರೈತರು ಜಮೀನಿನತ್ತ ಮುಖ ಮಾಡಿಲ್ಲ. ಜೋರಾಗಿ ಸುರಿದ ಮಳೆಯಿಂದಾಗಿ 21 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net