

ಚಿತ್ರದುರ್ಗ:ಹಿರಿಯೂರು ವಾಣಿವಿಲಾಸ ಜಲಾಶಯದ ಕೋಡಿ ಬೀಳಲು ಕ್ಷಣ ಗಣನೆ ಎದುರಾಗಿದೆ. ಡ್ಯಾಂನ ನೀರಿನ ಮಟ್ಟ ಗುರು ವಾರಕ್ಕೆ 129.85 ಅಡಿಗೆ ಏರಿಕೆಯಾಗಿದ್ದು,ಗರಿಷ್ಠ ಮಟ್ಟ 130 ಅಡಿಗೆ ಮೂರು ಇಂಚು ಬಾಕಿ ಇದೆ. ಹೆಚ್ಚುವರಿ ನೀರು ಕೋಡಿ ಮೂಲಕ ನದಿಗೆ ಹರಿಯಲಿದೆ. ಆದ್ದರಿಂದ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ವಿಶ್ವೇಶ್ವರಯ್ಯ ಜಲ ನಿಗಮದ ಕಾರ‌್ಯಪಾಲಕ ಇಂಜಿನಿಯರ್ ಆರ್. ಚಂದ್ರಮೌಳಿ ನಾಗರಿಕರಿಗೆ ಮನವಿ ಮಾಡಿದ್ದಾರೆ. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿರುವ ಈ ಜಲಾಶಯ ನಿರ್ಮಾಣಗೊಂಡ ವಾಣಿವಿಲಾಸ ಜಲಾಶಯದ ಕೋಡಿ ಬೀಳುವ ಕ್ಷಣಕ್ಕಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಡ್ಯಾಂಗೆ ಬಿಗಿ ಭದ್ರತೆ ಒದಗಿಸಿದ್ದಾರೆ.
---