ವಿವಿ ಪಠ್ಯದ ಪರಿವಿಡಿಯಲ್ಲಿ ಯಡವಟ್ಟು

Published on

ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ 2024-25, 26 ಮತ್ತು 27ನೇ ಸಾಲಿಗೆ ನಿಗದಿಗೊಳಿಸಿದ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಅಡಿಯಲ್ಲಿ ಸಿದ್ದಪಡಿಸಿದ ಪರಿವಿಡಿ ಪಠ್ಯದಲ್ಲಿ ಹತ್ತಾರು ಕಾಗುತದೋಷಗಳನ್ನು ತಪ್ಪಾಗಿ ಬರೆದು ಯಡವಟ್ಟು ಮಾಡಿದೆ.
ಇತ್ತೀಚೆಗೆ ರಾಜ್ಯ ಸರ್ಕಾರ ಎನ್‌ಇಪಿಯಿಂದ ಎಸ್‌ಇಪಿ ಬದಲಾವಣೆ ಮಾಡಿತ್ತು. ಇದರನ್ವಯ ಹೊಸದಾಗಿ ಪರಿವಿಡಿ ರಚಿಸುವ ವೇಳೆ ವಾಣಿಜ್ಯ ಶಾಸ್ತ್ರದ ಪ್ರಥಮ ಸೆಮಿಸ್ಟರ್‌ನ ಕನ್ನಡ ಪಠ್ಯ ವಾಣಿಜ್ಯ ಸೌರಭದಲ್ಲಿ ಹತ್ತಾರು ಕಾಗುತದೋಷ, ಪಠ್ಯದ ಹೆಸರು, ಕವಿಗಳ ಹೆಸರನ್ನೇ ತಪ್ಪಾಗಿ ಬರೆಯಲಾಗಿದೆ. ಅಲ್ಲದೆ, ಇನ್ಷಿಯಲ್, ಹೆಸರು ನಡುವೆ ಸ್ಪೇಸ್ ಇಲ್ಲದೆ ಪರಿವಿಡಿ ರಚಿಸಲಾಗಿದೆ.
ಸುದ್ಧಿ(ಸುದ್ದಿ), ಕೆ.ಎಸ್.ನಿಸಾರ್ ಅಹ್ಮದ್( ಕೆ. ಎಸ್. ನಿಸಾರ್ ಅಹಮದ್), ಸುರಂ ಎಕ್ಕುಂಡಿ (ಸರಂ ಎಕ್ಕುಂಡಿ), ಜೆ.ಪಿ.ರಾಜರತ್ನಂ(ಜೆ.ಪಿ. ರಾಜರತ್ನಂ), ಕತಾಮಂಜರಿ (ಕಥಾಮಂಜರಿ), ಡಾ.ವೈ.ಚಂದ್ರಬಾಬು (ಡಾ.ವೈ. ಚಂದ್ರಬಾಬು), ಬಿ.ಜೆ.ಕನಕೇಶ ಮೂರ್ತಿ(ಬಿ.ಜಿ. ಕನಕೇಶ ಮೂರ್ತಿ), ಬೆಟ್ಟಿ (ಬೆಟ್ಟ ), ಸಂ.ಡಾ ರಂಗನಾಥ (ಸಂ.ಡಾ. ರಂಗನಾಥ), ಡಾ.ಬಸಮ್ಮ ಗಂಗನಹಳ್ಳಿ (ಡಾ.ಬಸಮ್ಮ ಗಂಗನಹಳ್ಳಿ ) ಎಂದು ಒಂದು ಪರಿವಿಡಿಯಲ್ಲಿ ಯೇ ಇಷ್ಟು ತಪ್ಪುಗಳನ್ನು ಬರೆಯಲಾಗಿದೆ. ಎಲ್ಲ ವಿಭಾಗದ ಪಠ್ಯದಲ್ಲಿ ಇನ್ನೇಷ್ಟು ತಪ್ಪು ಬರೆದ್ದಿದ್ದಾರೆ ಎಂಬುದು ಶಿಕ್ಷಣ ತಜ್ಞರ ಪ್ರಶ್ನೆಯಾಗಿದೆ. ಇವರ ಕೈಯಲ್ಲಿ ಕಲಿಯುವ ವಿದ್ಯಾರ್ಥಿಗಳು ಎಂಥಾ ಬುದ್ಧಿವಂತರಾಗಬಹುದು ಎಂಬು ಪೋಷಕರ ಆಲೋಚನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net