ವಿವಿ ಖಾಲಿ ಹುದ್ದೆ ಭರ್ತಿ ಸಂಪುಟ ಸಮ್ಮತಿಸಲಿ

1009Klb01
Published on

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯವೂ ಪ್ರಸ್ತುತ ಶೇ.೩೦ ಬೋಧಕ ಸಿಬ್ಬಂದಿ, ಶೇ.೪೦ ಬೋಧಕಕೇತರ ನೌಕರರಿಂದ ಕಾರ್ಯನಿರ್ವಹಿಸುತ್ತಿದ್ದು, ಖಾಲಿ ಹುದ್ದೆಗಳ ನೇಮಕ ಪ್ರಕ್ರಿಯೆ ಸರ್ಕಾರ ಹಂತದಲ್ಲಿ ನಡೆಯುತ್ತಿದೆ. ಈ ಪ್ರಕ್ರಿಯೆಗೆ ವೇಗ ನೀಡಲು ಕಲಬುರಗಿಯಲ್ಲಿ ಸೆ.೧೭ರಂದು ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತರೆ ಶಕ್ತಿ ಬರಲಿದೆ ಎಂದು ಕುಲಪತಿ ದಯಾನಂದ ಅಗಸರ ಹೇಳಿದರು.
ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿ ೪೫ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಉನ್ನತ ಶಿಕ್ಷಣ ಇಲಾಖೆಯಲ್ಲಿ ನೇಮಕ ಪ್ರಕ್ರಿಯೆ ಪೆಂಡಿAಗ್ ಇದ್ದು, ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ೫೦ ಅಥವಾ ೧೦೦ ಕೋಟಿ ರೂ. ಅನುದಾನ ನೀಡಲಿ ಎಂದು ಮನವಿ ಮಾಡಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ಇವೆ. ಆದರೆ ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿ, ಸುಭದ್ರ ಭವಿಷ್ಯರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಗುಲ್ಬರ್ಗ ವಿವಿ ಕಳೆದ ೪೪ ವರ್ಷದಲ್ಲಿ ನಿರಂತರವಾಗಿ ಹೊಸ ಹೊಸ ಪ್ರಯೋಗಗಳೊಂದಿಗೆ ಮುಂದಡಿ ಇಡುತ್ತಿದೆ. ಇದುವರೆಗೆ ಆದ ೧೦ ಕುಲಪತಿಗಳು ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಈ ಭಾಗದ ಹಿರಿಯರು, ಮುತ್ಸದ್ದಿಗಳು, ಜನಪ್ರತಿನಿಧಿಗಳು, ಶಿಕ್ಷಣಾಸಕ್ತರ ಶ್ರಮದಿಂದ ೧೯೮೦ರಲ್ಲಿ ಸ್ವತಂತ್ರÈ ವಿಶ್ವವಿದ್ಯಾಲಯ ಆರಂಭವಾಗಿದೆ. ವಿವಿ ಸ್ಥಾಪನೆಯಲ್ಲಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ಇದುವರೆಗೆ ಯಶಸ್ವಿಯಾಗಿ ವಿವಿ ಹೆಜ್ಜೆ ಹಾಕುತ್ತಿದ್ದು, ಇಲ್ಲಿನ ಪ್ರತಿ ಬೋಧಕ, ಬೋಧಕೇತರ ಸಿಬ್ಬಂದಿಯ ಶ್ರಮವೂ ಅಡಗಿದೆ ಎಂದು ಹೇಳಿದರು.
ಸಿಂಡಿಕೇಟ್ ಸದಸ್ಯ ಪ್ರೊ.ಜಿ.ರಾಮುಲು ಮಾತನಾಡಿ, ಗುಲ್ಬರ್ಗ ವಿವಿಯೂ ಸಮಾಜ ಶಾಸ್ತç, ಸಾಮಾಜಿಕ ವಿಷಯಗಳ ಮೇಲೆ ಸಂಶೋಧನೆ, ಅಧ್ಯಯನ ನಡೆಸಿ, ಬೆಳಕು ಚೆಲ್ಲುವ ಪ್ರಯತ್ನ ನಿರಂತರವಾಗಿ ಮಾಡುತ್ತಿದೆ. ಎಲ್ಲ ವಿಭಾಗಗಳು ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸುತ್ತಿವೆ. ಈ ಭಾಗದ ವಿಷಯಗಳ ಬಗ್ಗೆ ಅಧ್ಯಯನ ಮಾಡಿ, ರಾಷ್ಟç, ಅಂತಾರಾಷ್ಟçದ ಮಟ್ಟದಲ್ಲಿ ಪರಿಚಯಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಸಿಂಡಿಕೇಟ್ ಸದಸ್ಯ ಎಸ್.ಪಿ.ಸುಳ್ಳದ, ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ.ಕೆ.ಸಿದ್ದಪ್ಪ, ಮೌಲ್ಯಮಾಪನ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ, ಕುಲಸಚಿವ ಪ್ರೊ.ರಾಜನಾಳ್ಕರ್ ಲಕ್ಷö್ಮಣ ಇತರರಿದ್ದರು. ಎಚ್.ಟಿ.ಪೋತೆ ವಿವಿ ಸಾಧನೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net