

ತುಮಕೂರು: ಹಾಸನದ ಸರ್ಕಾರಿ ಕಲೆ, ವಾಣಿಜ್ಯ ಮತ್ತು ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಅಂತರ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿವಿ ಕಲಾ ಕಾಲೇಜಿನ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನ ಪಡೆದಿದೆ.
ಎಸ್.ತೇಜಸ್, ಆರ್.ರೋಹನ್, ಎನ್.ರಾಜಶೇಖರ, ಎಚ್.ಎಲ್.ಮಹೇಶ್, ಕೆ.ಪಿ.ಲೋಕೇಶ್, ಜಿ.ಎನ್.ನಿತಿನ್, ಕೆ.ಪಿ.ವೆಂಕಟೇಶ್, ವಿ.ಎಸ್.ವೆಂಕಟೇಶ್, ಟಿ.ಕಿಶನ್ ಕುಮಾರ್, ಕೆ.ಜಿ.ದರ್ಶನ್, ಎಚ್.ಆರ್.ಅಂಜನ್ಕುಮಾರ್ ಹಾಗೂ ಎಸ್.ಎಂ.ರೋಹಿತ್ ತಂಡದಲ್ಲಿದ್ದರು.
ವಿಜೇತ ತಂಡದ ಸದಸ್ಯರನ್ನು ವಿವಿ ಕಲಾ ಕಾಲೇಜು ಪ್ರಾಚಾಯೆರ್ ಡಾ.ಜಿ.ದ್ರಾಕ್ಷಾಯಣಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಆರ್.ಸುದೀಪ್ಕುಮಾರ್, ಸಹಾಯಕ ನಿರ್ದೇಶಕ ಎಚ್.ವಿ.ಗಣೇಶ್ ಅಭಿನಂದಿಸಿದರು.