ವಿವಾಹ ನೋಂದಣಿ ಇಲ್ಲದೇ ಜನತೆಗೆ ತೊಂದರೆ

9-6 ctpr 1
Published on

ಚಿತ್ತಾಪುರ: ಪಟ್ಟಣದ ಉಪ ನೋಂದಣಿ ಕಚೇರಿಯಲ್ಲಿ 4 ತಿಂಗಳಿಂದ ವಿವಾಹ ನೋಂದಣಿಯಾಗದೇ ತಾಲೂಕಿನಲ್ಲಿ ನೋಂದಣಿ ಮಾಡಿಸಿಕೊಂಡು ವಿವಾಹವಾಗುವ ವಧು-ವರರಿಗೆ ತೊಂದರೆಯಾಗುತ್ತಿದೆ.
ಇಲ್ಲಿ ಸ್ಪೇಷಲ್ ವಿವಾಹಗಳು ಮಾತ್ರ ನೋಂದಣಿಯಾಗುತ್ತಿವೆ. ಹಿಂದೂ ವಿವಾಹಗಳು ಮಾತ್ರ 4 ತಿಂಗಳಿಂದ ನೋಂದಣಿಯಾಗುತ್ತಿಲ್ಲ. ತಾಂತ್ರಿಕ ದೋಷದಿಂದ ವಿವಾಹಗಳು ನಡೆಯುತ್ತಿಲ್ಲ. ವಿವಾಹವಾಗುವ ಬಯಸುವ ಅನೇಕ ವಧು- ವರರು ಹಾಗೂ ಪಾಲಕರು ಪ್ರತಿದಿನ ಕಚೇರಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಕೆಲದಿನಗಳಲ್ಲಿ ವಿವಾಹ ನೋಂದಣಿ ಆರಂಭವಾಗುತ್ತದೆ ಎಂದು ಅಧಿಕಾರಿಗಳು ದಿನ ಮುಂದೂಡುತ್ತಿದ್ದಾರೆ.
ಸರಳ ರೀತಿಯಲ್ಲಿ ನೋಂದಣಿ ಮಾಡಿಸಿಕೊಂಡು ವಿವಾಹವಾಗುವ ವಧು, ವರರಿಗೆ ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ. ಇಲಾಖೆಯವರು ಯಾವಾಗ ಸರಿಪಡಿಸುತ್ತಾರೆ, ಯಾವಾಗ ವಿವಾಹವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಯುವಕ, ಯುವತಿಯರಿದ್ದಾರೆ. ಇಲಾಖೆಯವರು ಸರಿಪಡಿಸಿ ನೋಂದಣಿ ಮಾಡಿಸಿ ವಿವಾಹವಾಗುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿ ಎಂಬುದು ಎಲ್ಲರ ಆಸೆ.Registration,
ಇಲಾಖೆಯಲ್ಲಿ ನೋಂದಣಿ ಮಾಡಿಸಿ ನನ್ನ ಮಕ್ಕಳ ಮದುವೆ ಮಾಡಿಸಬೇಕೆಂದು ನಾಲ್ಕೈದು ತಿಂಗಳಿಂದ ಕಚೇರಿಗೆ ಅಲೆದಾಡುತ್ತಿದ್ದೇನೆ. ಚಿತ್ತಾಪುರ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿ ವಿವಾಹ ನೆರವೇರಿಸಿಕೊಳ್ಳಿ ಎಂದು ಜಿಲ್ಲಾ ನೋಂದಣಾಧಿ ಕಾರಿ ಹೇಳುತ್ತಾರೆ. ಆದರೆ ಇಲ್ಲಿನ ನೋಂದಣಿ ಕಚೇರಿ ಅಧಿಕಾರಿಗಳು ಸುಳ್ಳು ಸಬೂಬು ಹೇಳಿ ದಿನಗಳು ಮುಂದೂಡುತ್ತಿದ್ದಾರೆ. ಮಲ್ಲಿಕಾj ಕಾಳಗಿ ಪುರಸಭೆ ಸದಸ್ಯ ಚಿತ್ತಾಪುರ

ಕಚೇರಿಯಲ್ಲಿ ತಾಂತ್ರಿಕ ದೋಷದಿಂದ 4 ತಿಂಗಳಿಂದ ಹಿಂದೂ ವಿವಾಹ ನೋಂದಣಿಯಾಗುತ್ತಿಲ್ಲ. ಸ್ಪೇಷಲ್ ವಿವಾಹಗಳ ನೋಂದಣಿ ನಡೆಯುತ್ತಿವೆ. ಸ್ಪೇಷಲ್ ಹಾಗೂ ಹಿಂದೂ ವಿವಾಹಗಳ ಕೋಡ್ ಸಂಖ್ಯೆ ಬೇರೆ ಬೇರೆಯಾಗಿವೆ. ಹಿಂದೂ ವಿವಾಹ ನೋಂದಣಿ ಕೋಡ್ ಸಂಖ್ಯೆಯಲ್ಲಿ ತಾಂತ್ರಿಕ ದೋಷವಿದೆ. ಸರಿಪಡಿಸುವಂತೆ ಬೆಂಗಳೂರಿನ ಮೇಲಾಧಿಕಾರಿಗೆ ಮನವಿ ಮಾಡಲಾಗಿದೆ. ಸರಿಪಡಿಸಿದ ನಂತರ ನೋಂದಣಿ ಕೆಲಸ ಆರಂಭಿಸಲಾಗುವುದು.
| ಪ್ರಕಾಶ ಪವಾರ ಪ್ರಭಾರಿ ಉಪ ನೋಂದಣಾಧಿಕಾರಿ
ಚಿತ್ತಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net