ವಿವಾದಿತ ಜಾಗದಲ್ಲಿದ್ದ ಕಟ್ಟಡಗಳ ಧ್ವಂಸ

4 ckm 8
ಚಿಕ್ಕಮಗಳೂರಿನ ತಾಲೂಕು ಕಚೇರಿ ಮುಂಭಾದಲ್ಲಿರುವ ಬಡಮಕಾನ್ ಹಾಗೂ ನಲ್ಲೂರು ಮಠದ ವಿವಾದಿತ ಜಾಗದಲ್ಲಿದ್ದ ಕಟ್ಟಡಗಳನ್ನು ಕೆಡವಿರುವುದು.
Published on

ಚಿಕ್ಕಮಗಳೂರು: ನಗರದ ಹನುಮಂತಪ್ಪ ವೃತ್ತ ಸಮೀಪದ ನಲ್ಲೂರು ಮಠದ ಜಾಗದ ವಿವಾದಕ್ಕೆ ಸಂಬAಧಿಸಿದAತೆ ಇಂದು ಬೆಳ್ಳಂಬೆಳಗ್ಗೆ ೪೨ ಅಡಿ ವಿವಾದಿತ ಜಾಗದಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಇದು ವಾಗ್ವಾದಕ್ಕೆ ಕಾರಣವಾಗಿದೆ.

ನಗರದ ತಾಲೂಕು ಕಚೇರಿ ಮುಂಭಾಗದ ಬಡಮಕಾನ್ ಮತ್ತು ನಲ್ಲೂರು ಮಠದ ಜಾಗದ ಕುರಿತು ಕಳೆದ ಹಲವು ವರ್ಷಗಳಿಂದಲೂ ವಿವಾದ ನಡೆಯುತ್ತಿದೆ. ಆದರೆ ಇಂದು ಏಕಾಏಕಿ ವಕ್ಫ್ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ಜಾಮೀಯಾ ಮಸೀದಿ ಕಮಿಟಿಯವರು ಬಡಮಕಾನ್ ಸಮೀಪದ ವಿವಾದಿತ ಸ್ಥಳದಲ್ಲಿದ್ದ ಕಟ್ಟಡಗಳಲ್ಲಿ ಕೆಲವನ್ನು ತೆರವುಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ತೆರವು ಕಾರ್ಯಾಚರಣೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ನೆಲ್ಲೂರು ಮಠದ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಡಮಕಾನ್ ಕಮಿಟಿ ಸದಸ್ಯರು ಹಾಗೂ ನಲ್ಲೂರು ಮಠದ ಕುಟುಂಬಸ್ಥರ ನಡುವೆ ವಾಗ್ವಾದವೂ ನಡೆದಿದೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ತೆರವು ಕಾರ್ಯಾಚರಣೆಯನ್ನು ನಿಲ್ಲಿಸಿ ಗುಂಪನ್ನು ಚದುರಿಸಿದ್ದಾರೆ.

ಯಾವುದೇ ಮುನ್ಸೂಚನೆ ನೀಡದೆ ಕಟ್ಟಡಗಳನ್ನು ಏಕಾಏಕಿ ತೆರವು ಕಾರ್ಯಾಚರಣೆ ಮಾಡಿದ ಪರಿಣಾಮ ಕೆಲ ಅಂಗಡಿ ಹಾಗೂ ಹೋಟೆಲ್‌ಗಳ ವಸ್ತುಗಳಿಗೂ ಹಾನಿಯಾಗಿದೆ. ಈ ವಿವಾದ ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದು. ಕೋರ್ಟ್ ಸೂಚನೆಯಂತೆ ಕಳೆದ ಒಂದುವರೆ ವರ್ಷದ ಹಿಂದೆ ಈ ಜಾಗದಲ್ಲಿ ಸರ್ವೆ ನಡೆಸಲಾಗಿತ್ತು. ಆದರೆ ಇದೀಗ ಏಕಾಏಕಿ ತೆರವು ಕಾರ್ಯಚರಣೆಗೆ ಮುಂದಾಗಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಈ ವಿಚಾರವಾಗಿ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಎಸ್‌ಪಿ ವಿಕ್ರಮ ಅಮಟೆ, ಎಡಿಸಿ ನಾರಯಣರಡ್ಡಿ ಕನಕರಡ್ಡಿ, ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ನೇತೃತ್ವದಲ್ಲಿ ಮೊದಲು ಹಿಂದೂ ಪರ ಸಂಘಟನೆಗಳ ಸಭೆ ನಡೆಸಿದರು.

ಒಂದು ತಾಸಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಏಕಾಏಕಿ ತೆರವು ಕಾರ್ಯಚರಣೆ ನಡೆಸಿದಕ್ಕೆ ಹಿಂದೂಪರ ಸಂಘಟನೆ ಕಾರ್ಯ ಕರ್ತರು ಸಭೆಯಲ್ಲಿ ಟೇಬಲ್ ಬಡಿದು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಾಹ್ನದ ಬಳಿಕ ಮುಸ್ಲಿಂ ಮುಖಂಡರ ಸಭೆ ನಡೆದಿದೆ. ತೆರವು ಕಾರ್ಯಾಚರಣೆಯ ನಡೆಸಿದ ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದ್ದು ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ನಗರಕ್ಕೆ ಆಗಮಿಸಿದ ಪಶ್ಚಿಮವಲಯದ ಐಜಿಪಿ ಅಮಿತ್‌ಸಿಂಗ್ ಘಟನೆಗೆ ಸಂಬAಧಿಸಿದAತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net