ವಿವಾದ ಸೃಷ್ಟಿಸಿದ ಆಧ್ಯಾತ್ಮಿಕ ಪ್ರವಚನ

01
Published on

ಯಾದಗಿರಿ : ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ವಿರಕ್ತ ಮಠದ ಶ್ರೀ ರಾಚೇಶ್ವರ ಮಹಾಶಿವಯೋಗಿಗಳ ೫೫೫ನೇ ಸ್ಮರಣೋತ್ಸವ ಅಂಗವಾಗಿ ಆಯೋಜಿಸಿರುವ ಸಂಚಾರಿ ಶಿವಾನುಭವ ಪ್ರವಚನ ಕಾರ್ಯಕ್ರಮ ಇದೀಗ ವಿವಾದಕ್ಕೆ ಕಾರಣವಾಗಿದೆ.

ಕಾನೂನು ಸುವ್ಯವಸ್ಥೆ ಪಾಲನೆ ಹಿನ್ನೆಲೆಯಲ್ಲಿ ಪ್ರವಚನ ನಡೆಯುವ ದಿನಗಳಂದು ಸಂಜೆ ೬ರಿಂದ ರಾತ್ರಿ ೧೦ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಆದೇಶಿಸಿದ್ದಾರೆ. ಕೊಡೇಕಲ್‌ನಲ್ಲಿ ರಾಚೇಶ್ವರ ಮಹಾಶಿವಯೋಗಿಗಳು ಕಾಲ್ಪನಿಕ ಹೆಸರು ಬಳಸಿ ಕೆಲವರು ಸಂಚಾರಿ ಶಿವಾನುಭವ ಗೋಷ್ಠಿ ಹೆಸರಲ್ಲಿ ಪ್ರವಚನ ಮೂಲಕ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹುಣಸಗಿ ಘಟಕ ತಹಸೀಲ್ದಾರ್‌ಗೆ ದೂರು ಸಲ್ಲಿಸಿದೆ.

ಇನ್ನು ಪ್ರವಚನ ಕಾರ್ಯಕ್ರಮದ ಬಗ್ಗೆ ಸಂಬAಧಿತ ಪೊಲೀಸ್ ಠಾಣೆಗಳಿಂದ ಆಯೋಜಕರು ಅನುಮತಿ ಪಡೆದಿಲ್ಲ ಎಂದು ಉಲ್ಲೇಖಿಸಿರುವ ಎಸಿ, ವಿಧಾನಸಭಾ ಚುನಾವಣೆ ವೇಳೆ ಕೊಡೇಕಲ್ ಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ರಾಜಕೀಯ ಪP್ಷÀಗಳ ಮಧ್ಯೆ ಮಾರಾಮಾರಿ ನಡೆದು ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತ್ತು. ಸದ್ಯ ಮಾರನಾಳ ಗ್ರಾಮದಲ್ಲೂ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಾರನಾಳ ಗ್ರಾಮದಲ್ಲಿ ಆ.೧೭ರಿಂದ ೨೧, ಬೂದಿಹಾಳದಲ್ಲಿ ೨೧ರಿಂದ ೨೮, ಹಗರಟಗಿಯಲ್ಲಿ ೨೭ರಿಂದ ೩೧, ರಾಜನಕೊಳ್ಳೂರದಲ್ಲಿ ಸೆ.೧-೭, ಎಣ್ಣಿ ವಡಗೇರಾದಲ್ಲಿ ೬-೧೦ ಮತ್ತು ಕೊಡೇಕಲ್‌ನಲ್ಲಿ ೧೦-೧೭ರವರೆಗೆ ನಿಷೇದಾಜ್ಞೆ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net