ವಿಲೇವಾರಿ ಸೌಲಭ್ಯ ಸ್ಥಾಪನೆಗೆ ಅನುಮತಿ

Published on

ಚಾಮರಾಜನಗರ: ಗುಂಡ್ಲುಪೇಟೆ ಪುರಸಭೆಯ ಸಂಯೋಜಿತ ಘನತ್ಯಾಜ್ಯ ನಿರ್ವಹಣೆ ಸಂಸ್ಕರಣೆ ಮತ್ತು ವಿಲೇವಾರಿ ಸೌಲಭ್ಯವನ್ನು ತಾಲೂಕಿನ ಕೂತನೂರು ಗ್ರಾಮದ 75, 77/1 ಹಾಗೂ 77/2 ಸರ್ವೆ ನಂಬರ್ ನಲ್ಲಿ ಸ್ಥಾಪಿಸಲು 12 ಎಕರೆ 28 ಗುಂಟೆ ವಿಸ್ತೀರ್ಣಕ್ಕೆ ಕರ್ನಾಟಕ ರಾಜ್ಯ ಮಟ್ಟದ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರದಿಂದ ಅನುಮತಿಯನ್ನು ನೀಡಲಾಗಿದೆ. ಪರಿಸರ ಅನುಮತಿ ಪತ್ರದ ಪ್ರತಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಮತ್ತು ಪ್ರಾಧಿಕಾರದ ವೆಬ್ ಸೈಟ್‌ನಲ್ಲಿ ಲಭ್ಯವಿದೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net