ಬುದ್ಧ, ಬಸವ, ಅಂಬೇಡ್ಕರರ ತತ್ತ್ವ-ಸಿದ್ಧಾಂತ ಪ್ರತಿಯೊಬ್ಬರೂ ಪಾಲಿಸಬೇಕಿದೆ

06
ಹುದಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಚಿವ ಸತೀಶ್ ಜಾರಕಿಹೊಳಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು. ರಾಹುಲ್ ಜಾರಕಿಹೊಳಿ, ಸಂತೋಷ ಗುಡಸ, ನಿಂಗಪ್ಪ ಧರನಟ್ಟಿ, ಲಕ್ಷ್ಮಣ ಬುಡ್ಯಾಗೋಳ, ಯಲ್ಲಪ್ಪ ಸುಲಧಾಳ ಇತರರಿದ್ದರು.
Published on

ಉಳಾಗಡ್ಡಿ-ಖಾನಾಪುರ: ವಿರೋಧ ಪಕ್ಷದವರು ಮತ್ತು ವಿರೋಗಳು ಇಲ್ಲದಿದ್ದರೆ ನಾವು ಮಾಡಿದ ತಪ್ಪುಗಳು ಗೊತ್ತಾಗುವುದಿಲ್ಲ. ಜಾಗ್ರತೆಯಿಂದ ಇರಲೂ ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.


ಯಮಕನಮರಡಿ ಕ್ಷೇತ್ರದ ಹುದಲಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ಹೋರಾಟ ಇಷ್ಟಕ್ಕೆ ನಿಂತಿಲ್ಲ. ಬುದ್ಧನ ಆಸೆ ನೆರವೇರಿಸಬೇಕು. ಬಸವಣ್ಣವರ ಸಮಾಜತೆ ಬಗ್ಗೆ ಒತ್ತು ಕೊಡಬೇಕಿದೆ. ಡಾ. ಅಂಬೇಡ್ಕರ್ ಸಂವಿಧಾನ ಉಳಿಸಿಕೊಳ್ಳಬೇಕಿದೆ ಎಂದರು.

ಬುದ್ಧ, ಬಸವ, ಅಂಬೇಡ್ಕರರ ತತ್ತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ. ಕೌಶಲ, ಶಿಕ್ಷಣ, ಉದ್ಯಮ, ಪ್ರತಿಭೆಗಳನ್ನು ರೂಪಿಸಿ ಶಿಕ್ಷಣ-ಸಂಘಟನೆ- ಹೋರಾಟ ಬೆಳೆಸಬೇಕು ಎಂದರು. ಬುದ್ಧನೆಡೆಗೆ ಹೋಗುವುದೆಂದರೆ ಜ್ಞಾನದ ಕಡೆಗೆ ಹೋಗುವುದು ಎಂದರ್ಥ. ಬುದ್ಧ ಇಡೀ ಜಗತ್ತಿನ ಜ್ಞಾನದ ಬೆಳಕು. ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ ದೊರಕಬೇಕಾದರೆ ಅನಿಷ್ಟ ಪದ್ಧತಿಗಳಿಂದ ದೂರ ಇರಬೇಕು ಎಂದರು.


ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಂಗೀತ ಕಾರ್ಯಕ್ರಮ ಜರುಗಿದವು. ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಅಮರ ಸಿದ್ದೇಶ್ವರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಯುವ ನಾಯಕ ರಾಹುಲ್ ಜಾರಕಿಹೊಳಿ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಸಂತೋಷ ಗುಡಸ, ನಿಂಗಪ್ಪ ಧರನಟ್ಟಿ, ಲಕ್ಷ್ಮಣ ಬುಡ್ಯಾಗೋಳ, ತಬಸುಮ ಬಂಡಿ, ಕೆಂಚವ್ವಾ ನಾಯಿಕ, ಲಕ್ಷ್ಮೀ ಕುರಬರ, ಲಕ್ಷ್ಮೀ ಲೋಹಾರ, ಯಲ್ಲಪ್ಪ ಸುಲಧಾಳ, ಶೋಭಾ ಮಾಳಗಿ, ಅಶ್ವಿನಿ ಗುಜನಾಳ, ರೇಷ್ಮಾ ಪಾಟೀಲ, ಸುಜಾತಾ ಕಾಂಬಳೆ, ಸುನಿತಾ ಗುಡದೆಗೋಳ ಸೇರಿ ಹುದಲಿ ಜಿಪಂ ವ್ಯಾಪ್ತಿಯ ವಿವಿಧ ಗ್ರಾಪಂಗಳಿಗೆ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net