ವಿರಾಟ ಹಿಂದು ಮಹಾಗಣಪತಿ ಮೂರ್ತಿ ವಿಸರ್ಜನೆ

3 HNL 4
Published on

ಹಾನಗಲ್ಲ: ಪಟ್ಟಣದ ತಾರಕೇಶ್ವರ ದೇವಸ್ಥಾನದ ಆವರಣದಲ್ಲಿ ಧರ್ಮ ಜಾಗರಣ ವೇದಿಕೆ ಪ್ರತಿಷ್ಠಾಪಿಸಿದ್ದ ವಿರಾಟ ಹಿಂದು ಮಹಾಗಣಪತಿ ಮೂರ್ತಿಯನ್ನು ಗುರುವಾರ ವಿಸರ್ಜನೆ ಮಾಡಲಾಯಿತು.

ಬೆಳಗ್ಗೆ 11ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸೇವಾ ಪ್ರಮುಖ ಗಂಗಾಧರ ಶೆಟ್ರು ಅವರು ವಿಸರ್ಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೂಗಳಿಂದ ಅಲಂಕೃತಗೊಂಡ ಅಶ್ವಾರೂಢ ರಥದಲ್ಲಿ ಆರಂಭಗೊಂಡ ಗಣೇಶ ಮೂರ್ತಿ ಮೆರವಣಿಗೆ, ಸೋಮವಾರಪೇಟೆ, ಕಲ್ಲಭಾವಿ ಕ್ರಾಸ್, ಮಹಾತ್ಮ ಗಾಂಧಿ ವೃತ್ತ, ಹಳೇ ಬಸ್ ನಿಲ್ದಾಣ, ಟಿ.ಜಿ. ರೋಡ್, ರಂಜನಿ ಚಿತ್ರಮಂದಿರ ರಸ್ತೆ, ಕಿತ್ತೂರ ಚನ್ನಮ್ಮ ರಸ್ತೆ ಮೂಲಕ ಸಂಚರಿಸಿ, ನಂತರ ಧರ್ವ ನದಿಯಲ್ಲಿ ವಿಸರ್ಜಿಸಲಾಯಿತು. ಡೋಲು, ತಾಳ ವಾದ್ಯ, ಜಾಗಟೆ, ಶಂಖ ಸೇರಿ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಧಾರ್ವಿುಕ ವಿಧಿ-ವಿಧಾನಗಳೊಂದಿಗೆ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಮೂರ್ತಿ ವಿಸರ್ಜನೆಗೂ ಮುನ್ನ ವೇದಿಕೆಯಲ್ಲಿ ಆರ್​ಎಸ್​ಎಸ್ ಜಿಲ್ಲಾ ಸೇವಾ ಪ್ರಮುಖ ಗಂಗಾಧರ ಶೆಟ್ರು, ಸಿಪಿಐ ಶಿವಶಂಕರ ಗಣಾಚಾರಿ, ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net