ವಿರಾಜಪೇಟೆ ತಾಲೂಕಿನ ರಸ್ತೆಗಳ ಅಭಿವೃದ್ಧಿ

03Vtp1 Road Ingration
ಹೆಗ್ಗಳ ನಿರ್ಮಲಗಿರಿ ಚರ್ಚ್ ರಸ್ತೆಗೆ 5 ಲಕ್ಷ ರೂ.ಅನುದಾನದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು. ಅಚ್ಚಪಂಡ ಮಹೇಶ್ ಗಣಪತಿ, ಪ್ರವೀಣ್, ಯಶೋದಾ, ಬೋಪಣ್ಣ, ಲಕ್ಷ್ಮೀ, ಧರ್ಮಗುರು ಜೋಸೆಫ್, ಅಂತೋಣಿ ಮತ್ತಿತರರಿದ್ದರು.
Published on

ವಿರಾಜಪೇಟೆ: ತಾಲೂಕಿನ ಅನೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಂಡಿದೆ. ಇತ್ತೀಚಿನ ಮಳೆಯಿಂದಾಗಿ ಈ ವರ್ಷ ತಡವಾಗಿ ಕಾಮಗಾರಿ ಪ್ರಾರಂಭಿಸಲಾಗಿದ್ದು, ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಕೆ.ಜಿ.ಬೋಪಯ್ಯ ಭರವಸೆ ನೀಡಿದರು.

ತಾಲೂಕಿನ ಹೆಗ್ಗಳ ನಿರ್ಮಲಗಿರಿ ಚರ್ಚ್ ರಸ್ತೆ ಹಾಗೂ ಹೆಗ್ಗಳ-ಬೂದಿಮೊಳ ಮುಖ್ಯರಸ್ತೆ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಅನುದಾನ ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ಕಾಮಗಾರಿ ನಡೆಯುವ ಸಂದರ್ಭ ಕಳಪೆಯಾಗದಂತೆ ಗ್ರಾಮಸ್ಥರು ಎಚ್ಚರ ವಹಿಸಬೇಕು. ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕಾಮಗಾರಿ ಮುಗಿಸುವಂತಾಗಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಈಗಾಗಲೇ ಗ್ರಾಮೀಣ ಭಾಗದ ಅನೇಕ ರಸ್ತೆಗಳ ಕಾಮಗಾರಿ ಮುಗಿದಿದೆ. ಇನ್ನು ಉಳಿದಿರುವ ಮುಖ್ಯರಸ್ತೆ ಹಾಗೂ ಎಲ್ಲಾ ರಸ್ತೆಗಳನ್ನು ಕೆಲವೇ ದಿನಗಳಲ್ಲಿ ಅಭಿವೃದ್ಧಿಗೊಳಿಸುವುದಾಗಿ ತಿಳಿಸಿದರು.

ಜಿಪಂ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಶಕ್ತಿ ಕೇಂದ್ರದ ಪ್ರವೀಣ್, ಬೇಟೋಳಿ ಗ್ರಾಪಂ ಅಧ್ಯಕ್ಷೆ ಯಶೋದಾ, ಸದಸ್ಯರಾದ ಬೋಪಣ್ಣ, ಲಕ್ಷ್ಮೀ, ಹೆಗ್ಗಳ ಚರ್ಚ್ ಧರ್ಮಗುರು ಜೋಸೆಫ್, ಅಂತೋಣಿ, ಗುತ್ತಿಗೆದಾ ರರಾದ ಸಿ.ಪ್ರವೀಣ್, ಎ.ಹರೀಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net