ವಿಮೋಚನೆ ನಾಟಕ ವೀಕ್ಷಿಸಿದ ಪ್ರಿಯಾಂಕ್ ಅಜಯಸಿಂಗ ಅಲ್ಲಮಪ್ರಭು ಇನ್ನಿತರ ಗಣ್ಯರು

IMG-20230916-WA0064
Published on


ವಿಜಯವಾಣಿ ವಾಣಿ ಸುದ್ದಿಜಾಲ ಕಲಬುರಗಿ

ಕಲಬುರಗಿ ರಂಗಾಯಣದ ಕಲಾವಿದರು ಹೈದ್ರಾಬಾದ್ ಕರ್ನಾಟಕ ವಿಮೋಚನೆ ಕುರಿತು ನಾಟಕ ಪ್ರದರ್ಶಿಸಿದರು. ರಾಜಾ ವೆಂಕಟಪ್ಪ ನಾಯಕರ ಹೋರಾಟ, ರಜಾಕರರ ದಬ್ಬಾಳಿಕೆ, ನಿಜಾಮರ ಅಸಹಕಾರ, ಪಟೇಲರ ಪೊಲೀಸ್ ಕಾರ್ಯಾಚರಣೆ ಎಲ್ಲವು ಅರ್ಧ ಗಂಟೆ ನಾಟಕದಲ್ಲಿ ಪ್ರಸ್ತುತಪಡಿಸಲಾಯಿತು. ಸಚಿವ ಪ್ರಿಯಾಂಕ್ ಖರ್ಗೆ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಆದಿಯಾಗಿ ಶಾಸಕರು, ಅಧಿಕಾರಿಗಳು ಸಂಪೂರ್ಣ ನಾಟಕ ವೀಕ್ಷಿಸಿದರು.

ವಿಧಾನಸಭೆ ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಎಂ.ಎಲ್.ಸಿ ತಿಪ್ಪಣಪ್ಪ ಕಮಕನೂರ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ., ಡಿ.ಸಿ. ಬಿ.ಫೌಜಿಯಾ ತರನ್ನುಮ್, ಗುಲಬರ್ಗಾ ವಿ.ವಿ.ಕುಲಪತಿ ಪ್ರೊ.ದಯಾನಂದ ಅಗಸರ್, ಪ್ರೊಬೆಷನರ್ ಐ.ಎ.ಎಸ್. ಗಜಾನನ ಬಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ, ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಲಬುರಗಿ ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ಅ.ನಾಸಿ ಸೇರಿದಂತೆ ಅನೇಕ ಕಲಾ ರಸಿಕರು, ಕಲಾಭಿಮಾನಿಗಳು, ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು ಸಾಂಸ್ಕೃತಿಕ ಸಂಜೆಗೆ ಸಾಕ್ಷಿಯಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net