ವಿಮೆಗಾಗಿ ದಾಖಲಾತಿ ನೀಡಿ:ಕಲ್ಲಟ್ಟಿ

IMG-20250820-WA0034
Published on

ವಿಮೆಗಾಗಿ ದಾಖಲಾತಿ ನೀಡಿ

ಸಂಕೇಶ್ವರ : ಇಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಸದಸ್ಯರಿಗೆ ಗ್ರೂಪ್ ಪರ್ಸನಲ್ ಅಪಘಾತ ವಿಮೆ ಮಾಡಿಸಲು ಕಾರ್ಖಾನೆ ಆಡಳಿತ ಮಂಡಳಿ ನಿರ್ಧರಿಸಿದೆ. ವಿಮೆ ಮಾಡಿಸಲು ಸದಸ್ಯರು ತಮ್ಮ ಆಧಾರ ಕಾರ್ಡ್‌ ಝರಾಕ್ಸ್ ಪ್ರತಿಯನ್ನು ಕಾರ್ಖಾನೆಗೆ ನೀಡುವಂತೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಮನವಿ ಮಾಡಿದ್ದಾರೆ.

ವಿಮೆ ಪಾಲಸಿ ಪ್ರೀಮಿಯಂ ಹಣವನ್ನು ಕಾರ್ಖಾನೆಯ ಭರಿಸಲಿದೆ. ಸದಸ್ಯರ ವಯಸ್ಸು ತಿಳಿದುಕೊಳ್ಳಲು ಆಧಾರ ಕಾರ್ಡ್ ಅವಶ್ಯಕವಾಗಿದ್ದು, ಕೆಲ ಸದಸ್ಯರು ನೀಡಿದ್ದು, ಇನ್ನು ನೀಡದೆ ಇರುವವರು ಕ್ಷೇತ್ರದ ( ಫೀಲ್ಡ್) ಸಿಬ್ಬಂದಿಗೆ ಆ.31ರ ಒಳಗಾಗಿ ನೀಡಬೇಕು, ನೀಡದೆ ಇರುವ ಸದಸ್ಯರು ವಿಮಾ ಪಾಲಸಿ ಸೌಲಭ್ಯದಿಂದ ವಂಚಿತರಾಗುತ್ತಾರೆ. ವಿಮಾ ಪಾಲಿಸಿಗಾಗಿ ಮಾತ್ರ ಆಧಾರ ಕಾರ್ಡ್ ಬಳಸಲಾಗುತ್ತದೆ, ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸುತ್ತಿಲ್ಲ ಎಂದು ಅವರು ಪ್ರಕಟನೆಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net