ವಿಮೆ ಯೋಜನೆಗಳಿಂದ ನಿಮ್ಮ ಕುಟುಂಬಕ್ಕೆ ನೆರವು

07 yelandur 05
Published on

ಯಳಂದೂರು: ಅಟಲ್ ಪಿಂಚಣಿ, ಜೀವನ ಜ್ಯೋತಿ ವಿಮಾ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಗಳನ್ನು ನಾಗರಿಕರು ವಿಮೆ ಮಾಡಿಸಿಕೊಂಡರೆ ನಿಮಗೆ ಅಥವಾ ನಿಮ್ಮ ಕುಟುಂಬಗಳಿಗೆ ನೆರವಾಗಲಿದೆ ಎಂದು ಅಂಬಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪುಟ್ಟರಾಜು ತಿಳಿಸಿದರು.


ಅಂಬಳೆ ಗ್ರಾ.ಪಂ. ಆವರಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಗ್ರಾಹಕರ ಸೇವಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ ಸಾಮಾಜಿಕ ಭದ್ರತಾ ಯೋಜನೆಗಳ ಅಭಿಯಾನ ಕ್ಕೆ ಚಾಲನೆ ನೀಡಿ ಮಾತನಾಡಿದರು.


ಬ್ಯಾಂಕ್ ಖಾತೆ ಇರುವ ನಾಗರಿಕರು ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ಪ್ರತಿ ವರ್ಷ 20 ರೂ.ಗಳಿಗೆ ವಿಮೆ ಮಾಡಿಸಿದರೆ, ಅಪಘಾತದಲ್ಲಿ ಮರಣ ಅಥವಾ ಭಾಗಶಃ ಅಂಗವೈಕಲ್ಯ ಹೊಂದಿದರೆ ಈ ವಿಮಾ ಯೋಜನೆ ಮೂಲಕ 2 ಲಕ್ಷ ರೂ.ಗಳನ್ನು ಪಡೆದುಕೊಳ್ಳಬಹುದು. ಜತೆಗೆ ಪ್ರಧಾನ ಮಂತ್ರಿ ಜೀವನ್‌ಜ್ಯೋತಿ, ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಇತರ ಯೋಜನೆಗಳಲ್ಲಿ ನಾಗರಿಕರು ಹಣ ತೊಡಗಿಸಿದರೆ ತುರ್ತು ಸಮಯದಲ್ಲಿ ನಿಮ್ಮ ಕುಟುಂಬದವರಿಗೆ ನೆರವಾಗಲಿದೆ ಎಂದು ತಿಳಿಸಿದರು.


ಗ್ರಾ.ಪಂ. ಸದಸ್ಯ ಸಿದ್ದನಾಯಕ, ಗ್ರಾಹಕರ ಸೇವಾ ಕೇಂದ್ರದ ಸಿ.ಎನ್.ರಂಗಸ್ವಾಮಿ, ಅಂಬಳೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು, ಮುಖಂಡರಾದ ವೈ.ಕೆ.ಮೋಳೆ ಎಂ.ನಾಗರಾಜು, ಮಹದೇವಸ್ವಾಮಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net