ವಿಮೆ ಪರಿಹಾರ ಹೋರಾಟಕ್ಕೆ ಸಂದ ಜಯ

avanna mayakeri
Published on

ಕಲಬುರಗಿ: ಜಿಲ್ಲೆಯ ರೈತರಿಗೆ ೬೬೭.೭೩ ಕೋಟಿ ರೂ. ವಿಮೆ ಪರಿಹಾರ ನೀಡಿ ರ‍್ಕಾರ ನೆರವಿಗೆ ನಿಂತ್ತಿದ್ದು, ರೈತರ ಹೋರಾಟಕ್ಕೆ ಸಂದ ಜಯವಾಗಿದೆ. ಬಾಕಿ ವಿಮೆ ಮಾಡದ ರೈತರಿಗೆ ೩೦೦ ಕೋಟಿ ರೂ. ಪರಿಹಾರ ರಾಜ್ಯ ರ‍್ಕಾರ ನೀಡಬೇಕು ಎಂದು ಜಿಲ್ಲಾ ರೈತ ಹೋರಾಟ ಸಮಿತಿಯ ಅವ್ವಣ್ಣ ಮ್ಯಾಕೇರಿ ಆಗ್ರಹಿಸಿದರು.

ಜಿಲ್ಲೆಯಲ್ಲಿ ೨.೦೨ ಲಕ್ಷ ಹೆಕ್ಟೆರ್​ನಲ್ಲಿ ವಿವಿಧ ಬೆಳೆ ಹಾಳಾಗಿವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ರ‍್ಕಾರಕ್ಕೆ ವರದಿ ಸಲ್ಲಿಸಿದ್ದರು. ವಿಮೆ ತುಂಬಿದ ರೈತರಿಗೆ ೬೬೭.೭೩ ಕೋಟಿ ರೂ. ವಿಮೆ ಪರಿಹಾರ ಬಂದಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಗೆ ಹೆಚ್ಚಿನ ವಿಮೆ ಹಣ ಬಂದಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ‍್ಖಗೆ, ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಸೇರಿ ಜಿಲ್ಲಾಧಿಕಾರಿ ಪ್ರಯತ್ನ ಉತ್ತಮವಾದದ್ದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತ ಮುಖಂಡ ದಯಾನಂದ ಪಾಟೀಲ್​ ಮಾತನಾಡಿ, ರೈತರ ಮೂರು ದಿನದ ಹೋರಾಟದಿಂದ ಒತ್ತಡ ಸೃಷ್ಟಿಯಾಗಿತ್ತು. ಅಧಿವೇಶನದಲ್ಲಿ ರ‍್ಚೆ ನಡೆದಿತ್ತು. ಆದ್ದರಿಂದ ವಿಮೆಯ ಕ್ರಾಪ್​ ಕಟ್ಟಿಂಗ್​ ಸೇರಿ ಯಾವುದೇ ಮೋಸ ಮಾಡಲು ಆಗಿಲ್ಲ. ಹೆಚ್ಚಿನ ರೈತರಿಗೆ ಪರಿಹಾರ ದೊರಕಿದೆ ಎಂದರು.

ತೊಗರಿ ಬೆಳೆಗಾರರ ಸಂದ ಅಧ್ಯಕ್ಷ ಬಸವರಾಜ ಇಂಗಿನ, ಗಿರೀಶ ಪಾಟೀಲ್​, ಶರಣಗೌಡ ಪಾಟೀಲ್​, ಭೀಮಶೆಟ್ಟಿ ಮುಕ್ಕಾ, ಎಸ್​.ಎಚ್​.ಬರಗಾಲಿ, ಮಲ್ಲಣ್ಣ ಮೇಳಕುಂದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net