ಹುಬ್ಬಳ್ಳಿ- ಬೆಂಗಳೂರು- ದೆಹಲಿ (ಹಿಂಡಾನ್) ವಿಮಾನ ಹಾರಾಟ ಇಂದಿನಿಂದ

AIR
Published on

ಹುಬ್ಬಳ್ಳಿ: ಲಾಕ್​ಡೌನ್ ಸಡಿಲಿಕೆ ಬಳಿಕ ಸೋಮವಾರದಿಂದ ಲೋಹದ ಹಕ್ಕಿ ಮತ್ತೆ ಹಾರಾಟ ಶುರು ಮಾಡಲಿದ್ದು, ಅದಕ್ಕಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ ಸಜ್ಜಾಗಿದೆ. ಮೊದಲ ದಿನ ಹುಬ್ಬಳ್ಳಿ- ಬೆಂಗಳೂರು- ದೆಹಲಿ (ಹಿಂಡಾನ್) ನಡುವೆ ಸ್ಟಾರ್ ಏರ್ ವಿಮಾನ ಸಂಚರಿಸಲಿದೆ. ಎಲ್ಲ 50 ಆಸನಗಳು ಭರ್ತಿಯಾಗಿವೆ. ವಿಮಾನ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ವಿಮಾನ ಹೊರಡುವ ಎರಡು ತಾಸು ಮುಂಚೆ ನಿಲ್ದಾಣಕ್ಕೆ ಆಗಮಿಸಲು ಸೂಚಿಸಲಾಗಿದೆ. ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net