ಮಂಗಳೂರು: ದುಬೈಯಿಂದ ಆಗಮಿಸಿದ ಕೇರಳ ಕೊಪ್ಪ ನಿವಾಸಿ ಮಮ್ಮಿನಿ ಖಾಲಿದ್ ಎಂಬಾತ ಚಿನ್ನ ಅಕ್ರಮ ಸಾಗಾಟ ಮಾಡುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಆತನಿಂದ 33,75,470 ರೂ. ಮೌಲ್ಯದ 737 ಗ್ರಾಂ ಚಿನ್ನ ವನ್ನು ಅದಕ್ಕಾಗಿ ವಿಶೇಷವಾಗಿ ವಿನ್ಯಾಸ ಮಾಡಿದ ಒಳ ಉಡುಪಿನಲ್ಲಿ ಬಚ್ಚಿಟ್ಟು ಸಾಗಾಟ ಮಾಡಿದ್ದ. ಎರಡು ದಿನಗಳ ಹಿಂದೆ ಕೋಟಿ ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿತ್ತು.