

ಮೈಸೂರು: ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಸಂಬಂಧಪಟ್ಟಂತೆ ಭೂಸ್ವಾಧೀನ ಪ್ರಕ್ರಿಯೆಯ ಪ್ರಗತಿ ಬಗ್ಗೆ ಸಂಸದ ಪ್ರತಾಪ ಸಿಂಹ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಇದಕ್ಕಾಗಿ ಈಗಾಗಲೇ 50 ಕೋಟಿ ರೂ. ಭೂ ಪರಿಹಾರ ವಿತರಣೆಯಾಗಿದ್ದು, 3-4 ದಿನದಲ್ಲಿ ಇನ್ನೂ 100 ಕೋಟಿ ರೂ. ಬಿಡುಗಡೆಯಾಗಲಿದೆ ಎಂದು ಸಂಸದರು ತಿಳಿಸಿದರು.
ವಿಶೇಷ ಭೂಸ್ವಾಧೀನ ಅಧಿಕಾರಿ ಪ್ರಿಯದರ್ಶಿನಿ ಮತ್ತು ಕೆ.ಐ.ಡಿ.ಬಿ. ಅಧಿಕಾರಿಗಳಿದ್ದರು.