ವಿಮಾನ ನಿಲ್ದಾಣಕ್ಕೆ ಅಪಸ್ವರ: ಜಿಗಜಿಣಗಿ ಕೆಂಡಾಮಂಡಲ

IMG-20210115-WA0046_20210217162629814
Published on

ವಿಜಯಪುರ: 41 ವರ್ಷ ರಾಜಕಾರಣ ಮಾಡೇನಿ, ನಾನೆಂದೂ ಹೇಸಿಗೆ ಕೆಲಸ ಮಾಡಿಲ್ಲ ಎನ್ನುವ ಮೂಲಕ ಸಂಸದ ರಮೇಶ ಜಿಗಜಿಣಗಿ ಎದುರಾಳಿಗಳಿಗೆ ಚಾಟಿ ಬೀಸಿದ್ದಾರೆ.

ಬುಧವಾರ ರಾಣಿ ಚನ್ನಮ್ಮ ಸಮುದಾಯ ಭವನದ ರಾಜ್ಯ ಪ್ರಕೋಷ್ಟಕ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣ ಆಗಬೇಕೆಂಬುದು ಈ ಜಿಲ್ಲೆ ಜನರ ಬೇಡಿಕೆಯಾಗಿತ್ತು. ಆಗ ನಾನು ಚಿಕ್ಕೋಡಿಯಲ್ಲಿದ್ದೆ. ಜಿಲ್ಲೆಗೆ ಬಂದ ಬಳಿಕ ಇಲ್ಲಿನ ಜನ ಯಡಿಯೂರಪ್ಪ ಅವರು ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ಅದನ್ನು ಪೂರ್ಣಗೊಳಿಸಿ ಎಂದರು. ಆ ಬಳಿಕ ಸಾಕಷ್ಟು ಬಾರಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ. ಸುಮಾರು ಒಂದೂವರೆ ವರ್ಷ ನನ್ನ ಚಪ್ಪಲಿ ಸವೆಸಿದ್ದೇನೆ. ನಮ್ಮವರೇ ಆದ ಕಾರಜೋಳ ಅವರು ಉಪಮುಖ್ಯಮಂತ್ರಿ ಇದ್ದು ಅವರ ಇಲಾಖೆಯಿಂದ ಮಾಡಲು ಮನವಿ ಮಾಡಿದ್ದೇನೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದರು.

ಸದರಿ ಜಾಗೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವಲ್ಲಿ ನನ್ನ ಸ್ವಾರ್ಥ ಇಲ್ಲ. ಅಲ್ಲಿ ನನ್ನ ಜಮೀನಿಲ್ಲ. ಇನ್ನೂ ಬೇರೆಯವರು ಏನೇನು ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ಅವರ ತರಹ ನಾನೇನು ಮಾಡಿಲ್ಲ. ನಾನು ನಮ್ಮ ಸಿಎಂ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ಬರದ ಹಾಗೇ ಕೆಲಸ ಮಾಡಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net