ವಿಮಾ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿ ಶಾಖೆವತಿಯಿಂದ ಜನಸುರಕ್ಷಾ ಅಭಿಯಾನ ಆಯೋಜಿಸಲಾಗಿತ್ತು. ಜಿ.ಮಧುಸೂಧನ್, ಸಿ.ಎನ್.ರಾಜೇಶ್, ಎಚ್.ಎಸ್.ದೇವೇತಗೌಡ, ಅಜೀತ್, ಕೆ.ಕೆ.ಶ್ರೀದೇವಿ ಇತರರು ಇದ್ದರು.
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿ ಶಾಖೆವತಿಯಿಂದ ಜನಸುರಕ್ಷಾ ಅಭಿಯಾನ ಆಯೋಜಿಸಲಾಗಿತ್ತು. ಜಿ.ಮಧುಸೂಧನ್, ಸಿ.ಎನ್.ರಾಜೇಶ್, ಎಚ್.ಎಸ್.ದೇವೇತಗೌಡ, ಅಜೀತ್, ಕೆ.ಕೆ.ಶ್ರೀದೇವಿ ಇತರರು ಇದ್ದರು.
Published on

ಬೆಟ್ಟದಪುರ: ಗ್ರಾಮೀಣ ಬ್ಯಾಂಕ್‌ನಲ್ಲಿ ಸಿಗುವ ಎಲ್ಲ ಸವಲತ್ತುಗಳನ್ನು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿ ಶಾಖೆ ವ್ಯವಸ್ಥಾಪಕ ಜಿ.ಮಧುಸೂದನ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮಂಗಳವಾರ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಜನಸುರಕ್ಷಾ ಅಭಿಯಾನದಲ್ಲಿ ಮಾತನಾಡಿದರು.

ಕೆಟ್ಟ ಸಮಯ, ಸಂದರ್ಭದಿಂದ ಕುಟುಂಬಕ್ಕೆ ಆಸರೆಯಾದವರನ್ನು ನಾವು ಕಳೆದುಕೊಂಡಾಗ ದಿಕ್ಕು ಇಲ್ಲದಂತಾಗುತ್ತದೆ. ಕಷ್ಟದಲ್ಲಿ ಇರುವಂಹ ಕುಟುಂಬಗಳಿಗೆ ಕೊನೆಯಲ್ಲಿ ಆರ್ಥಿಕವಾಗಿ ಸಹಾಯ ಮಾಡುವುದು ವಿಮೆ ಯೋಜನೆಗಳು ಮಾತ್ರ. ಹಾಗಾಗಿ ಪ್ರತಿಯೊಬ್ಬರೂ ವಿಮೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷಾ ಬಿಮ ವಿಮೆ ಸೌಲಭ್ಯಗಳು ಹಾಗೂ ಅಟಲ್ ಪಿಂಚಣಿ ಯೋಜನೆಯಂತಹ ಹಲವು ಯೋಜನೆಗಳಿದ್ದು, ಇವುಗಳ ನೋಂದಣಿಗಾಗಿ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ತಮ್ಮ ಖಾತೆಗಳಿಗೆ ಇತ್ತೀಚಿನ ವಿಳಾಸ ಧೃಡಿಕರಣ ಪತ್ರ, ಗುರುತಿನ ಚೀಟಿ, ಆಧಾರ್ ಸಂಖ್ಯೆ, ಪಾನ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳು ನೋಂದಣಿ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ತಮ್ಮ ಆಧಾರ್ ಸಂಖ್ಯೆ, ಪಾನ್ ಕಾರ್ಡ್ ಇನ್ನಿತರ ದಾಖಲಾತಿಗಳನ್ನು ತೆಗೆದುಕೊಂಡು ಶಾಖೆಗೆ ಭೇಟಿ ನೀಡಿ, ನೋಂದಣಿ ಮಾಡಿಸಿಕೊಂಡು, ರಿಕೆವೈಸಿ, ಸಿಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಾಮ ನಿರ್ದೇಶಿತ ಸದಸ್ಯ ಸಿ.ಎನ್ ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಸ್ ದೇವೇಗೌಡ, ರಾಜ್ಯ ರೈತ ಸಂಘದ ಅಧ್ಯಕ್ಷ ಚಪ್ಪರದಹಳ್ಳಿ ಅಜೀತ್, ಪಿಡಿಒ ಕೆ.ಕೆ.ಶ್ರೀದೇವಿ, ಸಿಬ್ಬಂದಿ ಮಹೇಂದ್ರ, ಪವಿತ್ರಾ, ಸುವರ್ಣ, ಅಂಗನವಾಡಿ ಕಾರ್ಯಕರ್ತೆ ಆಶಾ, ಮುಖಂಡರಾದ ಸ್ವಾಮಿ ಭೋವಿ, ರಂಗಭೋವಿ, ಮಂಜೇಗೌಡ, ಪುನೀತ್, ದರ್ಶನ್, ನಟೇಶ್, ಯತೀಶ್, ಕುಳ್ಳರಂಗಭೋವಿ, ಮೀನಾಕ್ಷೀ, ಬ್ಯಾಂಕ್ ಸಿಬ್ಬಂದಿ ಸಂದೀಪ್, ಪುನೀತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net