

ಚಿತ್ರದುರ್ಗ: ತಾಲೂಕು ತುರುವನೂರು ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆವಿಮೆ ಕಟ್ಟಿದ ರೈತರಿಗೆ ನಯಾ ಪೈಸೆ ಪರಿಹಾರ ಬಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಡಾ.ವಾಸುದೇವ ಮೇಟಿ ಬಣದ ಮುಖಂಡರು ಬುಧವಾರ ಮನವಿ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಮೆಕ್ಕೆಜೋಳಕ್ಕೆ ಬೆಳೆವಿಮೆ ಪಾವತಿಸಿದ್ದು, ವಿಮಾ ಕಂಪನಿ ಬೆಳೆವಿಮೆ ಪರಿಹಾರ ನಿಗದಿ ಮಾಡಿದ್ದರೂ ಪರಿಹಾರದ ಮೊತ್ತ ಜಮಾ ಆಗಿಲ್ಲ. ಆದ್ದರಿಂದ ಕೂಡಲೇ ರೈತರಿಗೆ ಪರಿಹಾರ ಕೊಡಿಸಿಕೊಡಬೇಕು ಎಂದು ಆಗ್ರಹಿಸಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಎಡಿಸಿ, ಸಂಬಂಧಿಸಿದ ವಿಮಾ ಕಂಪನಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದರು. ಸಂಘದ ಪ್ರಮುಖರಾದ ಮಂಜುನಾಥ್, ತಿಪ್ಪಾರೆಡ್ಡಿ, ನಾಗರಾಜ್, ಪೂಜಾರಪ್ಪ, ದೀಕ್ಷಿತಾ, ಶ್ರೀನಿವಾಸ್, ಜಯಣ್ಣ, ವಾಸುದೇವರೆಡ್ಡಿ ಇದ್ದರು.