

ದೋರನಹಳ್ಳಿ : ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ವಿಭಿನ್ನ ಸಂಸ್ಕೃತಿ ಭಾರತ ದೇಶದ್ದಾಗಿದೆ ಎಂದು ಶ್ರೀ ಶಿವಲಿಂಗ ರಾಜೇಂದ್ರ ಶಿವಾಚಾರ್ಯ ಹೇಳಿದರು.
ಗ್ರಾಮದ ಶ್ರೀ ಶಾಂಭವಿ ಮಾತಾ ಚಿಕ್ಕಮಠದಲ್ಲಿ ಭಾನುವಾರ ಸಂಜೆ ದಸರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಇಲ್ಲಿ ಸನಾತನ ಕಾಲದಿಂದಲೂ ಅನೇಕ ಮಹಾತ್ಮರು ಆಗಿ ಹೋಗಿದ್ದಾರೆ. ಇದು ಮಹಾತ್ಮರ ನೆಲವಾಗಿದ್ದು ನಮ್ಮ ಸುದೈವ. ಬಸವಣ್ಣ, ಅಕ್ಕಮಹಾದೇವಿ, ಹೇಮರಡ್ಡಿ ಮಲ್ಲಮ್ಮ, ಗುಡ್ಡಾಪುರದ ದಾನಮ್ಮ, ದೋರನಹಳ್ಳಿ ಗುಡ್ಡದ ಮಹಾಂತೇಶ್ವರರು ಇವರೆಲ್ಲ ಮಹಾತ್ಮರು. ಆದರೆ ದುಷ್ಟ ಮನುಷ್ಯನ ನಡೆ, ನುಡಿ, ಕರ್ಮ ಒಂದಕ್ಕೊAದು ಸಂಬAಧ ಮತ್ತು ಅರ್ಥವಿರುವುದಿಲ್ಲ ಎಂದು ಹೇಳಿದರು.
ಕನ್ಯಾಕೋಳೂರ ಹಿರೇಮಠದ ಶ್ರೀ ಚನ್ನವೀರ ಶಿವಾರ್ಯ ದಸರಾ ಉತ್ಸವ ಕರ‍್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ದೊರೆ, ಉಪಾಧ್ಯಕ್ಷ ಈರಣ್ಣ ಕಸನ್, ನಾಗಪ್ಪ ಕಣೇಕಲ್, ಹಿರಿಯರಾದ ಗಣಪತರಾವ ಜೋಳದ, ವೀರಸಂಗಣ್ಣ ದೇಸಾಯಿ, ಭಗವಂತ್ರಾಯ ಮಲಗೊಂಡ, ಈಶ್ವರಪ್ಪ ಲಕ್ಕಶೆಟ್ಟಿ, ಸಂಗಣ್ಣ ಕರಿಸಂಗ, ಷಣ್ಮುಖಪ್ಪ ಕಕ್ಕೇರಿ, ಶರಣಪ್ಪ ದಿಗ್ಗಿ, ಅಂಬರೀಶ ತೆಲಗರ, ಕಲ್ಲಪ್ಪ ಖಾನಾಪುರ, ವೆಂಕಟೇಶ ಕಶೆಟ್ಟಿ, ಮಹೇಶ ಪತ್ತಾರ, ಹಳ್ಳೆಪ್ಪ ಹುಡೇದ್, ಅಬ್ದುಲ್ ಕರಿಂ ಮಠ್, ಅಲ್ಲಿಸಾಬ್ ಗೋಗಿ, ಮರೆಪ್ಪ ಕಸನ್, ಮಾನಪ್ಪ ಹುಲಸೂರ ಇತರರಿದ್ದರು.