ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನ ನಾಳೆ

sham sundhar kulkarni
Published on

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯದಿಂದ ಸಂಗಮೇಶ್ವರ ಸಭಾಗೃಹದಲ್ಲಿ ಭಾನುವಾರ ವಿಭಾಗ ಮಟ್ಟದ ೨ನೇ ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ವಲಯ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ತಿಳಿಸಿದರು.
ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿ¯್ಲೆಗಳಲ್ಲಿನ ದಾಸ ಸಾಹಿತ್ಯ ಸಾಧಕರಿಗೆ ಹರಿದಾಸ ರತ್ನ ಪ್ರಶಸ್ತಿ ಪ್ರದಾನ ಜತೆಗೆ ದಾಸ ಸಾಹಿತ್ಯದ ಪಿಎಚ್.ಡಿ ಪುರಸ್ಕೃತರು, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಶ್ವ ಹಿಂದು ಪರಿಷತ್ ಪ್ರಮುಖ ಲಿಂಗರಾಜ ಅಪ್ಪ ಉದ್ಘಾಟಿಸುವರು. ಕೆಕೆಆರ್‌ಡಿಬಿ ಚೇರ್ಮನ್ ಆದ ಸಮ್ಮೇಳನ ಸ್ವಾಗತ ಸಮಿತಿ ಅಧ್ಯP್ಷÀ ಡಾ.ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಉದ್ಯಮಿ ಸಂಜೀವ ಗುಪ್ತಾ, ಸ್ವಾಗತ ಸಮಿತಿ ಕಾರ್ಯಾಧ್ಯP್ಷÀ ಆನಂದ ದಂಡೋತಿ, ಕಸಾಪ ಜಿಲ್ಲಾಧ್ಯP್ಷÀ ವಿಜಯಕುಮಾರ ತೇಗಲತಿಪ್ಪಿ, ನೂತನ ವಿದ್ಯಾಲಯ ಸಂಸ್ಥೆ ಅಧ್ಯP್ಷÀ ಡಾ.ಗೌತಮ ಜಾಗಿರದಾರ ಉಪಸ್ಥಿತರಿರುವರು ಎಂದು ತಿಳಿಸಿದರು.
ಸಮ್ಮೇಳನ ಸರ್ವಾಧ್ಯP್ಷÀ ಡಾ.ವಾಸುದೇವ ಅಗ್ನಿಹೋತ್ರಿ ಅಧ್ಯP್ಷÀತೆ ವಹಿಸುವರು. ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಹರಿದಾಸರತ್ನ ಪ್ರಶಸ್ತಿ ಪ್ರದಾನ ಮಾಡುವರು. ಆಕಾಶವಾಣಿ ನಿವೃತ್ತ ಅಧಿಕಾರಿ ಡಾ.ಸದಾನಂದ ಪೆರ್ಲ ಸಮ್ಮೇಳನಾಧ್ಯP್ಷÀರ ಕನ್ನಡದ ಕೃಷ್ಣ ಪುಸ್ತಕ ಬಿಡುಗಡೆ ಮಾಡಲಿz್ದÁರೆ ಎಂದರು.
ಗೌರವ ಕಾರ್ಯದರ್ಶಿ ಧನೇಶ ಮಾಲಗತ್ತಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಂಬಳಿಮಠ, ಸಹ ಕಾರ್ಯದರ್ಶಿ ಶಿವಕುಮಾರ, ಸಂಗಣ್ಣ ಚೋರಗಸ್ತಿ, ಮಹಿಳಾ ಪ್ರತಿನಿಧಿ ವೆಂಕುಬಾಯಿ ರಜಪೂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net